Kodagu

ವಿದ್ಯುತ್ ವ್ಯತ್ಯಯ: 220 ಕೆವಿ ಮುಖ್ಯ ಮಾರ್ಗ ಟ್ರಿಪ್

admincoorgdaily

ವಿದ್ಯುತ್ ವ್ಯತ್ಯಯ: 220 ಕೆವಿ ಮುಖ್ಯ ಮಾರ್ಗ ಟ್ರಿಪ್
ಕುಶಾಲನಗರ, ಸೆ.09: ವಿದ್ಯುತ್ ಉತ್ಪಾದನಾ ಸ್ಥಾವರದಲ್ಲಿ ಫ್ರೀಕ್ವೆನ್ಸಿ ಡೌನ್ ಹಾಗೂ ಕಡಿಮೆ ವೋಲ್ಟೇಜ್ ನಿಂದಾಗಿ ಪವರ್ ಟ್ರಾನ್ಸ್ ಫಾರ್ಮರ್ ಮೇಲೆ ಭಾರಿ ಹೊರೆ ಬಿದ್ದ ಕಾರಣ 220 ಕೆವಿ ಮೈಸೂರು-ಹುಣಸೂರು-ಕುಶಾಲನಗರ ಮುಖ್ಯ ಮಾರ್ಗ ಟ್ರಿಪ್ ಆಗಿದೆ ಎಂದು ಚೆಸ್ಕಾಂ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಮುಖ್ಯ ಮಾರ್ಗ ಟ್ರಿಪ್ ಆಗಿರುವುದರಿಂದ ವಿದ್ಯುತ್ ಸರಬರಾಜು ಪುನಃಸ್ಥಾಪನೆ ವಿಳಂಬವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅನಿವಾರ್ಯ ಕಾರಣದಿಂದ ಉಂಟಾಗಿರುವ ವಿದ್ಯುತ್ ವ್ಯತ್ಯಯಕ್ಕೆ ಗ್ರಾಹಕರು ಸಹಕರಿಸುವಂತೆ ಚೆಸ್ಕಾಂ ಮನವಿ ಮಾಡಿದೆ.