Kodagu

ಶಾಸಕ ಮಂತರ್ ಗೌಡ ಬ್ಯಾನರ್ ಹರಿದ ಘಟನೆ ಖಂಡನೀಯ; ಕ್ರಮಕ್ಕೆ 24 ಗಂಟೆ ಗಡುವು ನೀಡಿದ ಅಭಿಮಾನಿ ಬಳಗ

admincoorgdaily

ಶಾಸಕ ಮಂತರ್ ಗೌಡ ಬ್ಯಾನರ್ ಹರಿದ ಘಟನೆ ಖಂಡನೀಯ; ಕ್ರಮಕ್ಕೆ 24 ಗಂಟೆ ಗಡುವು ನೀಡಿದ ಅಭಿಮಾನಿ ಬಳಗ
ಮಡಿಕೇರಿ: ನಗರದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತನೊಬ್ಬ ಶಾಸಕ ಡಾ.ಮಂತರ್ ಗೌಡ ಅವರ ಬ್ಯಾನರ್ ಹರಿದ ಘಟನೆ ತೀವ್ರ ಖಂಡನೀಯ ಎಂದು ಡಾ.ಮಂತರ್ ಗೌಡ ಅಭಿಮಾನಿ ಬಳಗದ ಕೊಡಗು ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಇಂತಹ ಕೃತ್ಯಗಳು ಜಿಲ್ಲೆಯಲ್ಲಿ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದ್ದು, ಸಂಬಂಧಪಟ್ಟವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

24 ಗಂಟೆಗಳೊಳಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಕೊಡಗು ಜಿಲ್ಲೆಯ ಮೂಲೆ ಮೂಲೆಗಳಿಂದ ಡಾ.ಮಂತರ್ ಗೌಡ ಅವರ ಅಭಿಮಾನಿಗಳು ಮಡಿಕೇರಿಯ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲು ಸಜ್ಜಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.