ವಿರಾಜಪೇಟೆ;ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ರೆ ಪೋಷಕರಿಗೆ ದಂಡ; ರೂ.25,000 ದಂಡ ವಿಧಿಸಿದ ಕೋರ್ಟ್
admincoorgdaily

ವಿರಾಜಪೇಟೆ: ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಪ್ರಕರಣದಲ್ಲಿ ವಿರಾಜಪೇಟೆ ಪ್ರಧಾನ ಮತ್ತು ಸಿ.ಜೆ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯವು ರೂ. 25,000/- ದಂಡವನ್ನು ಬಾಲಕನ ಪೋಷಕರಿಗೆ ವಿಧಿಸಿದೆ.
ಅಪ್ರಾಪ್ತರಿಗೆ ವಾಹನ ನೀಡುವುದು ಕಾನೂನು ವಿರೋಧವಾಗಿದ್ದು, ಈ ಬಗ್ಗೆ ಪೋಷಕರು ಜಾಗೃತರಾಗಿರಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಎಚ್ಚರಿಕೆ ನೀಡಿದೆ.