Kodagu

25ನೇ ವರ್ಷದ ಶ್ರೀ ವಿಶ್ವ ಕರ್ಮ ಪೂಜಾ ಕಾರ್ಯಕ್ರಮ

admincoorgdaily

25ನೇ ವರ್ಷದ ಶ್ರೀ ವಿಶ್ವ ಕರ್ಮ ಪೂಜಾ ಕಾರ್ಯಕ್ರಮ
ವಿರಾಜಪೇಟೆ: ಶ್ರೇಷ್ಠ ಮತ್ತು ಜೇಷ್ಠತೆ ಎನ್ನುವ ಮನೋಭಾವ ಮನುಜನ ಆಹ:ಕಾರವನ್ನು ಗುರುತಿಸುತ್ತದೆ. ಭಗವಂತನು ನೀಡಿರುವ ಕರ್ತವ್ಯವನ್ನು ಮನೋಸೊ ವಾಚ  ನಿರ್ವಹಿಸಿದಲ್ಲಿ ಸಂತೃಪ್ತ ಜೀವನ ನಿನದಾಗುತ್ತದೆ ಎಂದು ಬಂಟ್ವಾಳ ಎಸ್.ವಿ.ಎಸ್ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ಗಣೇಶ್ ಪುರೋಹಿತರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ ವಿರಾಜಪೇಟೆ ವತಿಯಿಂದ ನಗರದ ರಾಜಾ ರಾಜೇಶ್ವರಿ ಫಂಕ್ಷನ್ ಸಭಾಂಗಣ 25 ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ಹಾಗೂ ಮಹಾಸಭೆ ನಡೆಯಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಉಪನ್ಯಾಸಕ ಗಣೇಶ್ ಅವರು.
 ಋಷಿಮುನಿಗಳ ತಪಸ್ಸಿನ ಫಲವಾಗಿ ಲಭಿಸಿರುವ ವಿಷಯಗಳಿಂದ ವೇದಗಳು ಸೃಷ್ಟಿಯಾಯಿತು. ಎಲ್ಲಾ ದೇವತೆಗಳ ಸೃಷ್ಟಿಕರ್ತ ವಿಶ್ವಕರ್ಮ ಎಂದು ಭಾವಿಸಲಾಗಿದೆ. ಆಚಾರ್ಯ ಎಂದರೇ ಬ್ರಾಹ್ಮಣತ್ವದ ಆಚಾರಗಳನ್ನು ಕರಾರುವಾಕ್ಕಾಗಿ ಪಾಲನೆ ಮಾಡುತ್ತಾರೊ ಅವರುಗಳು ಬ್ರಾಹ್ಮಣರು ಎಂದು ಕರೆಸಿಕೊಳ್ಳುತ್ತಾರೆ. ಅಧಿ ಮತ್ತು ಅಂತ್ಯಾ ಕಾಣದ ವ್ಯಕ್ತಿ ವಿಶ್ವಕರ್ಮ ಅದರೇ ಅವರ ಜಯಂತಿ ಆಚರಿಸುವುದು ಸೆರಿಯಲ್ಲ ಎಂದು ಹೇಳಿದರು.

 ವಿಶ್ವಕರ್ಮನನ್ನು ಪೂಜೆಗೈಯುವ ಸರ್ವರು ವಿಶ್ವಕರ್ಮ ಅನುಯಾಯಿಗಳು. ವಿವಿಧ ಭಾಷೆ ಮತ್ತು ಆಚರಣೆಗಳಿಂದ ಕರ್ಮ ಧರ್ಮದಿಂದ ಬಂದ ಕುಲದ ನೆಲ ಬದಲಾಗುವುದಿಲ್ಲ.. ಧರ್ಮವನ್ನು ರಕ್ಷಣೆ ಮಾಡಿದಲ್ಲಿ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ ಎನ್ನುವ ತತ್ವಗಳ ಮೇಲೆ ವಿಶ್ವಕರ್ಮ ಸಮೂದಾಯ ನೆಲೆಕಾಣುವಂತಾಗಬೇಕು. ಎಂದು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಕೊಡಗು ಜಿಲ್ಲಾ  ವಿಶ್ವಕರ್ಮ ಒಕ್ಕೂಟ ಅದ್ಯಕ್ಷರಾದ ದೇವದಾಸ್ ಆಚಾರ್ಯ ಮಾತನಾಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ  ನಾಗರಾಜ್ ಆಚಾರ್ಯ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಸಮೂದಾಯ ಕ್ಕೆ ಲಭಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಜನಾಂಗ ಬಾಂದವರು ಸಂಘದ ಸದಸ್ಯತ್ವ ಪಡೆದು ಸಂಘಟನೆಯನ್ನು ಬಲಪಡಿಸಬೇಕು ಎಂದು ಹೇಳಿದರು.

ನಿರ್ದೇಶಕರಾದ ಎ.ಪಿ. ದಮೋಧರ ಆಚಾರ್ಯ ಅವರು ಸಂಘದ ವಾರ್ಷಿಕ ವರದಿ ವಾಚಿಸಿದರು.
ವಿರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸಂಘ (ರಿ) ವಿರಾಜಪೇಟೆ ಅದ್ಯಕ್ಷರಾದ ಕೆ.ಜಿ. ದಿವಾಕರ ಆಚಾರ್ಯ ಅವರು ಅದ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವಕರ್ಮ ಸಮೂದಾಯ ಬಾಂದವರ  ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ವಿಧ್ಯಾಬ್ಯಾಸ  ಮಾಡುತ್ತಿರುವ ಪ್ರತಿಭಾನ್ವಿತ 05 ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಂಟ್ವಾಳ ತಾಲೂಕಿನ ಪುರೋಹಿತರಾ ಶ್ರೀ ಗಣೇಶ್ ಅವರಿಂದ ಗಣಹೋಮ ಮತ್ತು ಸಮೂಹಿಕ ವಿಶ್ವ ಕರ್ಮ ಪೂಜೆ ನೆರೆವೇರಿಸಲಾಯಿತು.
ಸಂಘದ ಸದಸ್ಯರಾದ ನಾಗವೇಣಿ ಸ್ವಾಗತಿಸಿ ನಿರೂಪಿಸಿದರು. ಎ.ಪಿ. ಲೋಕೇಶ್ ಆಚಾರ್ಯ ಸರ್ವರನ್ನು ವಂದಿಸಿದರು.

ವಿರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ ವಿರಾಜಪೇಟೆ ಪದಾಧಿಕಾರಿಗಳು, ಸದಸ್ಯರು ಹಾಗೂ ತಾಲೂಕಿನ ವಿವಿದಡೆಗಳಿಂದ ಆಗಮಿಸಿದ ವಿಶ್ವಕರ್ಮ ಸಮೂದಾಯ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ; ಕಿಶೋರ್ ಕುಮಾರ್ ಶೆಟ್ಟಿ