ಮೇ06ರಿಂದ 10ರವರೆಗೆ ಜಮಾಅತ್‌ಗಳ ನಡುವೆ 2ನೇ ವರ್ಷದ ಕ್ರಿಕೆಟ್ ಪಂದ್ಯಾಟ

Apr 21, 2026 - 16:55
 0  409
ಮೇ06ರಿಂದ 10ರವರೆಗೆ  ಜಮಾಅತ್‌ಗಳ ನಡುವೆ 2ನೇ ವರ್ಷದ ಕ್ರಿಕೆಟ್ ಪಂದ್ಯಾಟ

ಮಡಿಕೇರಿ: ಜಿಲ್ಲೆಯ ವಿವಿಧ ಜಮಾಅತ್‌ಗಳ ನಡುವೆ 2ನೇ ವರ್ಷದ ಕ್ರಿಕೆಟ್ ಪಂದ್ಯಾಟ ಕಕ್ಕಬ್ಬೆಯ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕುಂಜಿಲ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ 60-70 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. 6 ಓವರ್‌ನ ಪಂದ್ಯಾಟ ಇದಾಗಿದ್ದು, ಮೇ1ರವರೆಗೆ ತಂಡಗಳ ನೋಂದಾಣಿಗೆ ಅವಕಾಶ ನೀಡಲಾಗಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.66,666 ನಗದು ಮತ್ತು ಆಕರ್ಷಕ ಟ್ರೋಪಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,333 ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು.

 ತೃತೀಯ ಹಾಗೂ ಚರ್ತುಥ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗವುದು. ಜತೆಗೆ ವಯುಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9845225284 ಸಂಖ್ಯೆಯನ್ನು ಸಂರ್ಕಿಸಬಹುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕುಂಜಿಲ ಸ್ಪೋರ್ಟ್ಸ್ ಕ್ಲಬ್‌ನ ಪ್ರಮುಖರಾದ ಮೊಯ್ದು ಕುಂಜಿಲ, ಶಮೀರ್, ಮುಸ್ತಾಫಾ, ರಿಜ್ವಾನ್, ಹನೀಫ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0