Kodagu

ಭಾಗಮಂಡಲದಲ್ಲಿ ನ.04 ರಿಂದ 3 ತಿಂಗಳ ಜೇನುಗಾರಿಕೆ ತರಬೇತಿ;ಅರ್ಜಿ ಆಹ್ವಾನ

admincoorgdaily

ಸಾಂದರ್ಭಿಕ ಚಿತ್ರ

 ಮಡಿಕೇರಿ; ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ರೈತರ ಮಕ್ಕಳಿಗೆ 3 ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮವು 2026 ರ ನವೆಂಬರ್, 04 ರಿಂದ  2027ರ ಫೆಬ್ರವರಿ, 03 ರವರೆಗೆ(ಪುರುಷ ಅಭ್ಯರ್ಥಿಗಳು ಮಾತ್ರ) ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಕೊಡಗು ಜಿಲ್ಲೆಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಅಕ್ಟೋಬರ್, 15 ರಿಂದ ಅಕ್ಟೋಬರ್, 28 ರವರೆಗೆ ಅರ್ಜಿಯನ್ನು ಈ ಕಚೇರಿಯಲ್ಲಿ/ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ(ಜಿ.ಪಂ), ಮಡಿಕೇರಿ/ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರ ಇಲಾಖಾ                     ವೆಬ್‍ಸೈಟ್: https://horticulturedir.karnataka.gov.in  ನಲ್ಲಿ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಅಕ್ಟೋಬರ್, 30 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಕನ್ನಡ ವಿಷಯಗಳೊಂದಿಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ಕುರಿತು ದಾಖಲೆ, ಜನ್ಮ ದಿನಾಂಕದ ಪ್ರಮಾಣ ಪತ್ರ ಅನ್ವಯಿಸಿದಲ್ಲಿ /ತಂದೆ/ತಾಯಿ /ಪೋಷಕರ ಹೆಸರಿನ ಆರ್‍ಟಿಸಿ, ಪಹಣಿ, ತಂದೆ/ ತಾಯಿ ಇಲ್ಲದಿದ್ದಲ್ಲಿ, ಪೋಷಕರಿಗೂ ಅಭ್ಯರ್ಥಿಗೂ ಇರುವ ಸಂಬಂಧದ ಕುರಿತು ಗ್ರಾಮ ಲೆಕ್ಕಾಧಿಕಾರಿಗಳ ದೃಢೀಕರಣ ಪತ್ರ, ಪೂರ್ಣ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆ, ಅಗತ್ಯವಿರುವ ಇತರೆ ಪ್ರಮಾಣ ಪತ್ರಗಳು, ಐಪಿಒ/ಡಿಡಿ ವಿವರಗಳು ಇತ್ಯಾದಿ). ಅರ್ಹ ಅಭ್ಯರ್ಥಿಗಳು ನಿಗಧಿತ ಸಮಯದೊಳಗೆ ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮಡಿಕೇರಿ ಇಲ್ಲಿಗೆ ಖುದ್ದು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ದೂ.ಸಂ. 9448407816/ 9945853350 ನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.