Kodagu

ಪಡಿತರ ಚೀಟಿಗೆ ಇಕೆವೈಸಿ, ಗಡುವು ಮತ್ತೆ ವಿಸ್ತರಣೆ; ನವೆಂಬರ್ 30 ಕೊನೆ ದಿನ; ಕೊಡಗು ಜಿಲ್ಲೆಯಲ್ಲಿ 1,66,753 ಪಡಿತರ ಚೀಟಿ ಸದಸ್ಯರ ಇಕೆವೈಸಿ ಪೂರ್ಣ

K.M ISMAIL KANDAKKARE

ಪಡಿತರ ಚೀಟಿಗೆ ಇಕೆವೈಸಿ, ಗಡುವು ಮತ್ತೆ ವಿಸ್ತರಣೆ; ನವೆಂಬರ್ 30 ಕೊನೆ ದಿನ;  ಕೊಡಗು ಜಿಲ್ಲೆಯಲ್ಲಿ 1,66,753 ಪಡಿತರ ಚೀಟಿ ಸದಸ್ಯರ ಇಕೆವೈಸಿ ಪೂರ್ಣ
(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ;ರಾಜ್ಯದಲ್ಲಿ 1 ವರ್ಷ ಹಾಗೂ 5 ವರ್ಷ ಮೇಲ್ಪಟ್ಟು ಪಡಿತರ ಚೀಟಿಗೆ ಇಕೆವೈಸಿ ದೃಢೀಕರಣಗೊಂಡಿರುವ ಫಲಾನುಭವಿಗಳ ಮರು ಇಕೆವೈಸಿ ಪೂರ್ಣಗೊಳಿಸಲು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಿಸಿರುವಂತೆ,ಇಕೆವೈಸಿ ಗೆ ಹೊಸ ಅಂತಿಮ ದಿನಾಂಕ ನವೆಂಬರ್ 30, 2026 ಆಗಿದೆ.
30-11-2026ರ ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕೊಡಗು ಜಿಲ್ಲೆಯಲ್ಲಿ ‌ಶೇಕಡಾ 83ರಷ್ಟು ಪೂರ್ಣ;


 ಕೊಡಗು ಜಿಲ್ಲೆಯಲ್ಲಿ ನವೆಂಬರ್ 10ರವರೆಗೆ ಶೇಕಡಾ 83ರಷ್ಟು ಪ್ರಗತಿ ಸಾಧಿಸಿದೆ
ಜಿಲ್ಲೆಯ ಒಟ್ಟು 1,99,801 ಸದಸ್ಯರ ಪೈಕಿ 1,66,753 ಸದಸ್ಯರ ಇಕೆವೈಸಿ ಪೂರ್ಣಗೊಂಡಿದೆ.
ವೆಬ್ ಆ್ಯಪ್ ಮೂಲಕ 1,62,071 ಹಾಗೂ ಮೊಬೈಲ್ ಆ್ಯಪ್ ಮೂಲಕ 4,682 ಸದಸ್ಯರು ಇಕೆವೈಸಿ ಮಾಡಿಸಿದ್ದಾರೆ. ಇನ್ನೂ 33,048 ಸದಸ್ಯರ ಇಕಯ ಬಾಕಿ ಇದೆ.


ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಗತಿಯಾಗಿದ್ದು, 44,408 ಸದಸ್ಯರ ಪೈಕಿ 38,560 ಮಂದಿ ಇಕೆವೈಸಿ ಮಾಡಿಸಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 46,405 ರಲ್ಲಿ 39,563 ಮಂದಿ, ಶೇ.85.26 ಪೂರ್ಣಗೊಂಡಿದೆ. ಕುಶಾಲನಗರದಲ್ಲಿ 41,998 ರಲ್ಲಿ 35,702 ಮಂದಿ, ಶೇ.85.01 ಪೂರ್ಣಗೊಂಡಿದೆ.

ವಿರಾಜಪೇಟೆ ತಾಲೂಕಿನಲ್ಲಿ 37,930 ರಲ್ಲಿ 30,504 ಮಂದಿ, ಶೇ.80.42 ಪೂರ್ಣಗೊಂಡಿದ್ದು, ಪೊನ್ನಂಪೇಟೆ ತಾಲೂಕಿನಲ್ಲಿ ಅತಿ ಕಡಿಮೆ ಪ್ರಗತಿಯಾಗಿದೆ.  29,060 ರಲ್ಲಿ 22,424 ಮಂದಿ ಮಾತ್ರ ಇಕೆವೈಸಿ ಮಾಡಿಸಿದ್ದು, ಶೇ.77.16 ರಷ್ಟಿದೆ.
ಬಾಕಿ ಇರುವ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಥವಾ ಮೊಬೈಲ್ ಆ್ಯಪ್ ಮೂಲಕ ಶೀಘ್ರ ಇಕೆವೈಸಿ ಮಾಡಿಸಿಕೊಳ್ಳುವಂತೆ ಆಹಾರ ಇಲಾಖೆ ಮನವಿ ಮಾಡಿದೆ.