ದುರ್ಗಾಪರಮೇಶ್ವರಿ ದೇವಾಲಯದ 36ನೇ ವರ್ಷದ ವಾರ್ಷಿಕೋತ್ಸವ
admincoorgdaily

ಮಡಿಕೇರಿ ;ನಗರದ ಪುಟಾಣಿ ನಗರದ ಇರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ 36ನೇ ವರ್ಷದ ವಾರ್ಷಿಕೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಗುರುವಾರ ಬೆಳಿಗ್ಗೆ 6.30ರ ನಂತರ ಗುರು ಗಣಪತಿ ಪೂಜೆ ಸ್ವಸ್ತಿ ಮಣ್ಯಾಹ ವಾಚನ, ಸ್ಥಳ ಶುದ್ಧಿ, ಗಣಪತಿ ಹೋಮ, ನವ ಕಲಶ ಪ್ರತಿಷ್ಠಾಪನ ಪೂರ್ವಕ ಶ್ರೀ ದುರ್ಗಾಪರಮೇಶ್ವರಿ ಷೋಡಶೋಪಚಾರ ಪೂಜೆ, ಕಳಶಾಭಿಶೇಕ, ಕುಂಕುಮಾರ್ಚನೆ, ಮಹಾನೈವೇದ್ಯ ಪೂರ್ವಾಹ್ನ : 10-30 ರವರೆಗೆ ಹಾಗೂ ಶ್ರೀ ದೇವಿಯ ಮಹಾ ಪ್ರಸಾದ ವಿತರಣೆ, ಸಂಜೆ 5.30 ರಿಂದ ದೇವಿ ದುರ್ಗಾ ಪೂಜೆ ನಡೆಯಿತು. ಶುಕ್ರವಾರ ಎಂದಿನಂತೆ ಬೆಳಿಗ್ಗೆ 7-00 ರಿಂದ 8-00 ಗಂಟೆಯವರೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.