ಐನ್ ಮನೆಗಳಿಗೆ ಸಂಪರ್ಕ ರಸ್ತೆ: 45 ಲಕ್ಷ ಕಾಮಗಾರಿಗೆ ಭೂಮಿಪೂಜೆ
admincoorgdaily

ಮಡಿಕೇರಿ: ತಾಲ್ಲೂಕಿನ ಮೆಕೇರಿ-ಬಿಳಿಗೇರಿ ಭಾಗದಲ್ಲಿ ತೋರೇರ ಉದಯ ಕುಟುಂಬಸ್ಥರು, ಅಂಜೇರಿರ ಕುಟುಂಬಸ್ಥರು, ಕಣ್ಣಚಂಡ ಕುಟುಂಬಸ್ಥರ ಐನ್ ಮನೆ ಹಾಗೂ ಪಣಲೆ ಕುಟುಂಬಸ್ಥರ ಐನ್ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ₹45 ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಸೌಕತ್ ಆಲೀ, ವಲಯ ಅಧ್ಯಕ್ಷರಾದ ಎಚ್. ಸಿ. ಪೊನ್ನಪ್ಪ, ಮಾಜಿ ಅಧ್ಯಕ್ಷರು ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರರು ತೆನ್ನಿರ ಮೈನಾ, ಪಂಚಾಯತ್ ಮಾಜಿ ಸದಸ್ಯರು ಹನೀಫ್, ಪಕ್ಷದ ಮುಖಂಡರು ಧ್ರುವ ಪೂಜಾರೀರ, ಸುಭಾಷ್, ಉದಯ, ಆಪ್ರು ರವೀಂದ್ರ, ಬಾಲಡಿ ಪ್ರತಾಪ್, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷರು ನಿಶ್ಚಲ್ ದಂಬೆಕೋಡಿ, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಹಂಸ ಕೊಡಿ, ಮಂಜೀರ ಸಾಬು ತಿಮ್ಮಯ್ಯ, ಮಂಡುವಂಡ ಕೌಶಿಕ್, ಮಂಜೀರ ಕುಟ್ಟಪ್ಪ, ಕಣ್ಣಚಂಡ ಗಿರೀಶ್, ಕೋಟೆರ ಈರಪ್ಪ, ಮುತ್ತಣ್ಣ, ಕಣ್ಣಚಂಡ ಕಾವೇರಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.