Kodagu

ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

admincoorgdaily

ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
ಮಡಿಕೇರಿ : ಮಕ್ಕಳಲ್ಲಿ ಸೃಜನಶೀಲತೆ, ಕಲಾಸಕ್ತಿ ಹಾಗೂ ಪರಿಸರ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ಮಡಿಕೇರಿಯ ಮಹದೇವಪೇಟೆಯ ಎಸ್ ಎಸ್ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ 4ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. 

ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಯ ಮಕ್ಕಳಿಗೆ ನಾನು ಮತ್ತು ನನ್ನ ತಾಯಿ ಎಂಬ ವಿಷಯ ನೀಡಲಾಗಿತ್ತು.

ವಿಜೇತರು;

ಪ್ರಥಮ ಬಹುಮಾನ : ಜಾಗೃತಿ ಎ. ಒಂದನೇ ತರಗತಿ, ಕೊಡಗು ವಿದ್ಯಾಲಯ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.2,000 ನಗದು
ದ್ವಿತೀಯ ಬಹುಮಾನ : ಟಿ. ಧ್ರುಪದ್ — ಒಂದನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.1,500 ನಗದು
ತೃತೀಯ ಬಹುಮಾನ : ಗುನಾಲಿ ಎ.ಎ. — ಯುಕೆಜಿ, ಯೂರೋಕಿಡ್ಸ್, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.1,000 ನಗದು

ಎರಡನೇ ವಿಭಾಗದ ಸ್ಪರ್ಧೆ;

ಎರಡನೇ ತರಗತಿಯಿಂದ ಆರನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮೀಸಲು ಅರಣ್ಯ ಎಂಬ ವಿಷಯ ನೀಡಲಾಗಿತ್ತು.

ವಿಜೇತರು;

ಪ್ರಥಮ ಬಹುಮಾನ : ರಚಿತ ವೈ.ಎಚ್. — ಆರನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.3,500 ನಗದು
ದ್ವಿತೀಯ ಬಹುಮಾನ : ಸಫಾ ಫಾತಿಮಾ — ಆರನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.3,000 ನಗದು
ತೃತೀಯ ಬಹುಮಾನ : ಬೊಳ್ಳಮ್ಮ ಎ.ಎ. ಆರನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.2,500 ನಗದು

ಮೂರನೇ ವಿಭಾಗದ ಸ್ಪರ್ಧೆ;

ಏಳನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ಸಮಯದ ಪ್ರಾಮುಖ್ಯತೆ ಎಂಬ ವಿಷಯ ನೀಡಲಾಗಿತ್ತು.

ವಿಜೇತರು;

ಪ್ರಥಮ ಬಹುಮಾನ : ಅಪೇಕ್ಷಾ ರೈ — ಒಂಬತ್ತನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.5,000 ನಗದು
ದ್ವಿತೀಯ ಬಹುಮಾನ : ಸಚಿನ್ ಪಿ.ಎನ್. — ಒಂಬತ್ತನೇ ತರಗತಿ, ಸೇಂಟ್ ಮೈಕೆಲ್ಸ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.4,500 ನಗದು

ತೃತೀಯ ಬಹುಮಾನ : ತೃಪ್ತಾ ಜೆ.ಜೆ.  ಒಂಬತ್ತನೇ ತರಗತಿ, ಸೇಂಟ್ ಜೋಸೆಫ್ ಶಾಲೆ, ಮಡಿಕೇರಿ
ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ರೂ.4,000 ನಗದು

ಕಲೆ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ;

ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಶ್ರೀ ಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲೆ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಚಿತ್ರಕಲೆಯ ಮೂಲಕ ಮಕ್ಕಳು ತಮ್ಮ ಕಲ್ಪನೆ, ಭಾವನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯವಾಗುತ್ತದೆ ಎಂದರು. 

ಇಂತಹ ಸ್ಪರ್ಧೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದ್ದು, ಕಲೆಯ ಮೂಲಕ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಕಲೆ ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಾಧನವಾಗಬೇಕು ಎಂದು ಕರೆ ನೀಡಿದರು.

ಎಸ್.ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶಿಲ್ಪಾ ಸತೀಶ್ ಮಾತನಾಡಿ, ಮಕ್ಕಳಲ್ಲಿ ಕಲಾಸಕ್ತಿಯನ್ನು ಉತ್ತೇಜಿಸುವುದು ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಚಿತ್ರಕಲೆ ಮಕ್ಕಳ ಸೃಜನಶೀಲತೆ, ಚಿಂತನೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಕಲೆ ಮತ್ತು ಸಮಾಜ ಸೇವೆ ಪರಸ್ಪರ ಸಂಬಂಧ ಹೊಂದಿದ್ದು, ಕಲೆಯ ಮೂಲಕ ಪರಿಸರ ಸಂರಕ್ಷಣೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಜನರಿಗೆ ತಲುಪಿಸಬಹುದು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿವೆ ಎಂದು ತಿಳಿಸಿದರು.

ಡಾ.ಸತೀಶ್ ಮಾತನಾಡಿ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಗೆ ಪ್ರೋತ್ಸಾಹ ನೀಡುವ ಜೊತೆಗೆ ಪರಿಸರ ಸಂರಕ್ಷಣೆ, ಕುಟುಂಬದ ಮಹತ್ವ ಹಾಗೂ ಸಮಯದ ಮೌಲ್ಯದ ಕುರಿತು ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದು, ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಸದಸ್ಯರಾದ ಎಚ್.ಎಂ.ನಂದಕುಮಾರ್, ಮಹೇಶ್ ಜೈನಿ, ಸವಿತಾ ರಾಕೇಶ್, ಆಡಿಟರ್ ಹನೀಫ್ ಮತ್ತಿತರರು ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ದಂಬೆಕೋಡಿ ಮೃಣಾಲಿನಿ ಚಿನ್ನಪ್ಪ ಕಾರ್ಯನಿರ್ವಹಿಸಿದರು.
ಸಾಮಾಜಿಕ ಸೇವೆಗಾಗಿ ಖಲೀಲ್ ಹಾಗೂ ಸಮೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಿ.ಸಿ.ತೇಜಸ್ ನಿರೂಪಿಸಿ, ಡಾ.ಸತೀಶ್ ಸ್ವಾಗತಿಸಿದರು, ಅಖಿಲ್ ಪ್ರಾರ್ಥಿಸಿದರು. ಡಾ.ಶಿಲ್ಪಾ ವಂದಿಸಿದರು, ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.