Kodagu

5 ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರ ಓಪನ್: 10 ಮೀಟರ್ ಅಂತರ ಕಡ್ಡಾಯ

admincoorgdaily

5 ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರ ಓಪನ್: 10 ಮೀಟರ್ ಅಂತರ ಕಡ್ಡಾಯ
ಮಡಿಕೇರಿ: ದುಬಾರೆ ಆನೆ ಶಿಬಿರದ ದುರಂತದ ಹಿನ್ನೆಲೆಯಲ್ಲಿ 5 ತಿಂಗಳಿನಿಂದ ಬಂದ್ ಆಗಿದ್ದ ಕೊಡಗಿನ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳು ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿವೆ.

ದುಬಾರೆ ಶಿಬಿರದಲ್ಲಿ ಆನೆಗಳ ಸಂಘರ್ಷದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಜಿಲ್ಲೆಯ ಎಲ್ಲ ಆನೆ ಶಿಬಿರಗಳನ್ನು ಬಂದ್ ಮಾಡಿತ್ತು.

ಇದೀಗ ಶಿಬಿರಗಳು ಪುನರಾರಂಭಗೊಂಡಿದ್ದು, ಪ್ರವಾಸಿಗರ ಸುರಕ್ಷತೆಗಾಗಿ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ. ಆನೆಗಳಿಂದ ಕನಿಷ್ಠ 10 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಆನೆಗಳನ್ನು ಮುಟ್ಟುವುದು, ನೀರು ಹಾಕುವುದು, ಸ್ನಾನ ಮಾಡಿಸುವುದು ಹಾಗೂ ಹತ್ತಿರದಿಂದ ಸೆಲ್ಫಿ, ಫೋಟೋ ತೆಗೆಯುವುದಕ್ಕೆ ನಿರ್ಬಂಧ ಹೇರಲಾಗಿದೆ.
ಆನೆಗಳು ಶಾಂತವಾಗಿ ಕಂಡರೂ ವರ್ತನೆ ಬದಲಾಗಬಹುದು. ಹೀಗಾಗಿ ಸಿಬ್ಬಂದಿ ಸೂಚನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಅರಣ್ಯ ಇಲಾಖೆ ತಿಳಿಸಿದೆ.