Kodagu

ದುಬಾರೆ ಆನೆ ಶಿಬಿರದಿಂದ 5 ಆನೆಗಳು ಮೈಸೂರು ದಸರಾಕ್ಕೆ ಗಜಪಯಣ

admincoorgdaily

ದುಬಾರೆ ಆನೆ ಶಿಬಿರದಿಂದ 5 ಆನೆಗಳು ಮೈಸೂರು ದಸರಾಕ್ಕೆ ಗಜಪಯಣ

ಕುಶಾಲನಗರ, ಆ.25 : ಈ ಬಾರಿ ನಡೆಯುವ ಮೈಸೂರು ದಸರಾ ಮಹೋತ್ಸವಕ್ಕೆ ದುಬಾರೆ ಸಾಕಾನೆ ಶಿಬಿರದ ಧನಂಜಯ (45), ಪ್ರಶಾಂತ (54), ಗೋಪಿ (43), ಶ್ರೀರಾಮ (41) ಮತ್ತು ಕಾವೇರಿ (46) ಎಂಬ 5 ಸಾಕಾನೆಗಳು ಪ್ರಯಾಣ ಬೆಳೆಸಲಿವೆ.

ಇದೇ ಬುಧವಾರ ಸಾಕಾನೆಗಳ ಈ ತಂಡವು ವೀರಹೊಸಹಳ್ಳಿಗೆ ಮಾವುತರ ಸಹಿತ ಲಾರಿಯಲ್ಲಿ ತೆರಳಲಿವೆ. ಈ 'ಗಜಪಯಣ' ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉಪಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಮೈಸೂರು ಅವರು ಮಡಿಕೇರಿ ವಿಭಾಗಕ್ಕೆ ಆದೇಶಿಸಿದ್ದಾರೆ.