Kodagu

ಯಂತ್ರ ಖರೀದಿಗೆ ಶೇ.50% ಸಹಾಯಧನ - ಕೂಡಲೇ ಅರ್ಜಿ ಹಾಕಿ

admincoorgdaily

ಯಂತ್ರ ಖರೀದಿಗೆ ಶೇ.50% ಸಹಾಯಧನ - ಕೂಡಲೇ ಅರ್ಜಿ ಹಾಕಿ
ಮಡಿಕೇರಿ :-ಪ್ರಸಕ್ತ (2026-27) ಸಾಲಿಗೆ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ತೋಟಗಾರಿಕೆ ಇಲಾಖೆಯಡಿ ವಿವಿಧ ಯೋಜನೆಯಡಿ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. 

2026-27ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಕಾರ್ಯಕ್ರಮದಡಿ ರೈತರಿಗೆ ಶೇ.90 ರಷ್ಟು ಸಹಾಯಧನದ ಸೌಲಭ್ಯವಿದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ(ಎಸ್‍ಎಂಎಎಂ)ರಡಿ ಕಳೆ ಕೊಚ್ಚುವ ಯಂತ್ರ, ಮರ ಕತ್ತರಿಸುವ ಯಂತ್ರ, ತಳ್ಳುವ ಗಾಡಿ, ಅಲ್ಯೂಮಿನಿಯಂ ಏಣಿ, ಪವರ್ ವೀಡರ್, ಕಾಳುಮೆಣಸು ಬಿಡಿಸುವ ಯಂತ್ರ, ಅಡಿಕೆ ಬಿಡಿಸುವ ಯಂತ್ರಗಳಿಗೆ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ ವರ್ಗ, ಮಹಿಳೆಯರಿಗೆ, ರೈತರಿಗೆ ಶೇ.50 ರಷ್ಟು ಸಹಾಯಧನ ಮತ್ತು ಇತರೆ ವರ್ಗದ ರೈತರಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುವುದು. 

ರಾಷ್ಟ್ರೀಯ ಎಣ್ಣೆಕಾಲು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು. 
ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಲಿಖಿತ ರಾಜ್ ಅವರು ತಿಳಿಸಿದ್ದಾರೆ.