Kodagu

ಚೆಂಬು ಗ್ರಾಮಕ್ಕೆ 55 ಲಕ್ಷದ ರಸ್ತೆ ಭಾಗ್ಯ: ಶಾಸಕ ಪೊನ್ನಣ್ಣರಿಂದ ಲೋಕಾರ್ಪಣೆ

admincoorgdaily

ಚೆಂಬು ಗ್ರಾಮಕ್ಕೆ 55 ಲಕ್ಷದ ರಸ್ತೆ ಭಾಗ್ಯ: ಶಾಸಕ ಪೊನ್ನಣ್ಣರಿಂದ ಲೋಕಾರ್ಪಣೆ
ಮಡಿಕೇರಿ: ಚೆಂಬು ಗ್ರಾಮಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು.

ಚೆಂಬು ಗ್ರಾಮದ ಏಣಿಯಾರು-ಉಂಬಳೆ ಭಾಗದ ರಸ್ತೆ ಅಭಿವೃದ್ಧಿಗೆ ಶಾಸಕರ ವಿಶೇಷ ಅನುದಾನದಲ್ಲಿ 50 ಲಕ್ಷ ರೂ. ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಬಳಕೆಗಾಗಿ ಶಾಸಕರು ಇಂದು ವಿಧ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.

ಇದೇ ಭಾಗದ ಮುಂದುವರಿದ ರಸ್ತೆ ಕಾಮಗಾರಿಗೆ ಶಾಸಕರು ತಮ್ಮ ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡಿದ್ದು, ಈ ಕಾಮಗಾರಿಯೂ ಪೂರ್ಣಗೊಂಡಿದ್ದು ಅದನ್ನು ಸಹ ಇಂದು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಆಲಿ, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಸುರೇಶ್ ಸಂಪಾಜೆ, ಚೆನಿಯಪ್ಪ ಕುದುರೆಪಾಯ, ಚೆನ್ನಪ್ಪ ಕುದುರೆಪಾಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.