ಶೂಟಿಂಗ್ ಕ್ಯಾಂಪ್‌ಗೆ ಕೊಡಗು ವಿದ್ಯಾಲಯದ 6 ಎನ್‌ಸಿಸಿ ಕೆಡೆಟ್‌ಗಳು ಆಯ್ಕೆ

Jul 16, 2026 - 17:47
 0  276
ಶೂಟಿಂಗ್ ಕ್ಯಾಂಪ್‌ಗೆ ಕೊಡಗು ವಿದ್ಯಾಲಯದ  6 ಎನ್‌ಸಿಸಿ ಕೆಡೆಟ್‌ಗಳು ಆಯ್ಕೆ

ಮಡಿಕೇರಿ, ಜುಲೈ 16: ನಗರದ ಕೊಡಗು ವಿದ್ಯಾಲಯಧ ಎನ್‌ಸಿಸಿ ಕೆಡೆಟ್‌ಗಳಾದ ಕಾರ್ಪೋರಲ್ ಜೇಷ್ಠ ಸುಬ್ಬಯ್ಯ, ಕೆಡೆಟ್ ನೀಲ್ ಅಯ್ಯಪ್ಪ, ಕಾರ್ಪೋರಲ್ ಯಶಿಕಾ ದೇವಯ್ಯ, ಸಾರ್ಜೆಂಟ್ ಆದ್ಯ ರೈ, ಲ್ಯಾನ್ಸ್ ಕಾರ್ಪೋರಲ್ ನಿಕಿತಾ ಕೆ.ಟಿ. ಹಾಗೂ ಲ್ಯಾನ್ಸ್ ಕಾರ್ಪೋರಲ್ ಹಿತಪ್ರಿಯ ಪಿ.ಎಸ್. ಅವರು, ಕರ್ನಾಟಕ–ಗೋವಾ ಡೈರೆಕ್ಟರೇಟ್ ವತಿಯಿಂದ ಆಯೋಜಿಸಲಾಗುತ್ತಿರುವ ಶೂಟಿಂಗ್ ಕ್ಯಾಂಪ್‌ಗೆ ಮಂಗಳೂರು ಗ್ರೂಪ್‌ನಿಂದ ಆಯ್ಕೆಯಾಗಿದ್ದಾರೆ.

ಕೊಡಗು, ಮಂಗಳೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಗ್ರೂಪ್‌ನಿಂದ ಒಟ್ಟು 12 ಮಂದಿ ಕೆಡೆಟ್‌ಗಳಲ್ಲಿ ಆರು ಮಂದಿ 19ನೆಯ ಬೆಟಾಲಿಯನ್ ಕೊಡಗು ವಿದ್ಯಾಲಯ ಶಾಲೆಯ ಕ್ರೆಡೆಟ್ ಗಳಾಗಿರುವುದು ವಿಶೇಷ. ವಿಜಯಪುರ ಜಿಲ್ಲೆಯ ತೋರಣಗಲ್ಲುವಿನಲ್ಲಿ ಜುಲೈ 17ರಿಂದ 26ರವರೆಗೆ ನಡೆಯಲಿರುವ ಹತ್ತು ದಿನಗಳ ಶೂಟಿಂಗ್ ಕ್ಯಾಂಪ್‌ನಲ್ಲಿ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿರುವ ಕೆಡೆಟ್‌ಗಳು ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಾಂಶುಪಾಲರಾದ ಕೆ ಎಸ್ ಸುಮಿತ್ರ ತಿಳಿಸಿದ್ದಾರೆ. ಇವರು 19ಕರ್ನಾಟಕ ಬೆಟಾಲಿಯನ್ ನ ಎನ್ ಸಿಸಿ ಕೆಡೆಟ್ ಗಳಾಗಿದ್ದು, ಶಾಲಾ ಎನ್ .ಸಿ. ಸಿ. ಅಧಿಕಾರಿ ಮೇಜರ್ ಐ ದಾಮೋದರ್ ಗೌಡ ಈ ಕೆಡೆಟ್ ಗಳಿಗೆ ತರಬೇತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0