69ನೇ NATIONAL GAMES:ಕರಾಟೆಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆ
admincoorgdaily

ಮಡಿಕೇರಿ: ಮಧ್ಯಪ್ರದೇಶದ ಇಂದೋರ್ ನಲಿ ನಡೆದ 69ನೇ ನೇಷನಲ್ ಸ್ಕೂಲ್ ಗೇಮ್ಸ್ 14 ವರ್ಷ ವಯೋಮಿತಿಯ ಕರಾಟೆ ಪಂದ್ಯಾವಳಿಯಲ್ಲಿ 01 ಬೆಳ್ಳಿ ಮತ್ತು 02 ಕಂಚಿನ ಪದಕಗಳು ಸೇರಿ ಒಟ್ಟು 03 ಪದಕಗಳು ಕರ್ನಾಟಕ ರಾಜ್ಯದ ಪಾಲಾಗಿದೆ.02 ಪದಕಗಳನ್ನು ಕೊಡಗಿನ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.20 ಕೆಜಿ ವಿಭಾಗದಲ್ಲಿ ಕೂಡಿಗೆಯ ಜ್ಞಾನೋದಯ ಶಾಲೆಯ ಕುನಾಲ್ ಟಿ ಪಿ, -24 ಕೆಜಿ ವಿಭಾಗದಲ್ಲಿ ಅಂಜೆಲಾ ವಿದ್ಯಾನಿಕೇತನ ಶಾಲೆಯ ಅನ್ವಿತಾ ಶೆಟ್ಟಿ ವಿದ್ಯಾರ್ಥಿಗಳು ಕಂಚಿನ ಪದಕ ಪಡೆದಿದ್ದಾರೆ.
ಕರ್ನಾಟಕ ತಂಡದ ತರಬೇತುದಾರರಾಗಿ ಯಡವನಾಡು ಗ್ರಾಮದ ಶ್ರೀ ಪ್ರಮೋದ್ ಬಿ ಪಿ ಹಾಗೂ ವಿಜೇತ ಕಾರ್ಯನಿರ್ವಹಿಸಿದ್ದರು.