6ನೇ ಮೈಸೂರು ಕಪ್ 2026' ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್: ವಿರಾಜಪೇಟೆ ವಿದ್ಯಾರ್ಥಿಗಳ ಭರ್ಜರಿ ಸಾಧನೆ
admincoorgdaily

'
ವಿರಾಜಪೇಟೆ:ಮೈಸೂರಿನ ನಜರ್ಬಾದ್ನಲ್ಲಿರುವ ಚಾಮುಂಡಿ ವಿಹಾರ ಸ್ಟೇಡಿಯಂನ ಇಂದೋರ್ ಆಡಿಟೋರಿಯಂನಲ್ಲಿ ವಿ.ಎನ್ ಯೋಧಾ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮೈಸೂರು ಇದರ ವತಿಯಿಂದ ಆಯೋಜಿಸಲಾಗಿದ್ದ '6ನೇ ಮೈಸೂರು ಕಪ್ 2026' ರಾಷ್ಟçಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೊ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆ ಮೆರೆದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸೆನ್ಸೈ ಪಿ.ಆರ್. ಶಿವಪ್ಪ ಅವರ ಮುಖ್ಯ ತರಬೇತಿದಾರಿಕೆಯಲ್ಲಿ ಹಾಗೂ ಕೋಚ್ ಭರತ್ ಬಿ.ಬಿ. ಅವರ ಮಾರ್ಗದರ್ಶನದಲ್ಲಿ ಈ ಕ್ರೀಡಾಪಟುಗಳು ತರಬೇತಿ ಪಡೆದು ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದರು.
ವಿಜೇತ ವಿದ್ಯಾರ್ಥಿಗಳ ವಿವರ:
ಸ್ಪರ್ಧೆಯಲ್ಲಿ ದೃತಿಕ್ ಡಿ ಕುಮಿತೆ ಪ್ರಥಮ, ಕಟಾ ದ್ವಿತೀಯ, ಕಾರ್ತಿಕ್ ಕೆ.ಎಚ್. (ಕುಮಿತೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ), ಗಾನವಿ ಎನ್.ಎಲ್. (ಕುಮಿತೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ), ಪ್ರಜನ್ ಎಂ.ಬಿ. (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ಸಮಿತ್ ಪಿ.ಬಿ. (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ನಿರಂಜನ (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ಚೈತ್ರ ಪಿ.ಜೆ. (ಕುಮಿತೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ), ಕೃಶಾಂಕ್ ಎಂ.ಎಸ್. (ಕುಮಿತೆ ದ್ವಿತೀಯ ಸ್ಥಾನ, ಕಟಾ ಪ್ರಥಮ ಸ್ಥಾನ), ಕೃತಿಕ್ ಎಂ. (ಕಟಾ ಪ್ರಥಮ ಸ್ಥಾನ), ಧನುಶ್ರೀ (ಕಟಾ ಪ್ರಥಮ ಸ್ಥಾನ), ಆದರ್ಶ್ ಕೆ.ಬಿ. (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಅನುರಾಗ್ (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಬಿಂದ್ಯಾ ಪಿ.ಬಿ. (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಹರಿದ (ಕುಮಿತೆ ದ್ವಿತೀಯ ಸ್ಥಾನ, ಕಟಾ ದ್ವಿತೀಯ ಸ್ಥಾನ), ಗಿಲನ್ ಬಿ.ಬಿ. (ಕಟಾ ದ್ವಿತೀಯ ಸ್ಥಾನ), ಗಗನ್ ಎಸ್. (ಕಟಾ ದ್ವಿತೀಯ ಸ್ಥಾನ), ಡೆನಿಶ್ ಪಿ.ಎಲ್. (ಕಟಾ ದ್ವಿತೀಯ ಸ್ಥಾನ), ಅಭಿನವ್ (ಕಟಾ ದ್ವಿತೀಯ ಸ್ಥಾನ), ಆದಮ್ (ಕಟಾ ದ್ವಿತೀಯ ಸ್ಥಾನ), ಧ್ಯಾನ್ (ಕಟಾ ದ್ವಿತೀಯ ಸ್ಥಾನ), ಹಿಮನಿ (ಕಟಾ ದ್ವಿತೀಯ ಸ್ಥಾನ) ಹಾಗೂ ದಿವಿಕ್ಷ ಡಿ. (ಕುಮಿತೆ ತೃತೀಯ ಸ್ಥಾನ, ಕಟಾ ತೃತೀಯ ಸ್ಥಾನ) ಬಹುಮಾನಗಳನ್ನು ಪಡೆದುಕೊಂಡಿದ್ದಾರೆ
ಮಕ್ಕಳ ಈ ಅದ್ಭುತ ಸಾಧನೆಗೆ ಮುಖ್ಯ ತರಬೇತಿದಾರರಾದ ಸೆನ್ಸ್ ಪಿ.ಆರ್. ಶಿವಪ್ಪ, ಕೋಚ್ ಭರತ್ ಬಿ.ಬಿ., ಕರಾಟೆ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.