ಹೋಂವರ್ಕ್ ಮಾಡದಿದ್ದಕ್ಕಾಗಿ ಶಾಲೆಯಲ್ಲಿ 7 ವರ್ಷದ ಬಾಲಕನನ್ನು ತಲೆಕೆಳಗಾಗಿ ನೇತು ಹಾಕಿ ಥಳಿತ!

Sep 30, 2025 - 12:06
Sep 30, 2025 - 12:11
 0  966
ಹೋಂವರ್ಕ್ ಮಾಡದಿದ್ದಕ್ಕಾಗಿ ಶಾಲೆಯಲ್ಲಿ 7 ವರ್ಷದ ಬಾಲಕನನ್ನು ತಲೆಕೆಳಗಾಗಿ ನೇತು ಹಾಕಿ ಥಳಿತ!
Photo credit: free press journal

ಚಂಡೀಗಢ: ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಅಮಾನವೀಯ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಯನ್ನು ಹೋಂವರ್ಕ್ ಮಾಡದ ಕಾರಣಕ್ಕೆ ತಲೆಕೆಳಗಾಗಿ ನೇತು ಹಾಕಿ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕಳೆದ ಶನಿವಾರ ಮಗುವಿನ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

 ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಶಾಲೆಯ ಪ್ರಾಂಶುಪಾಲೆ ರೀನಾ ಹಾಗೂ ಶಾಲಾ ವಾಹನ ಚಾಲಕ ಅಜಯ್ ನನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿದೆ. ಶಿಕ್ಷಣ ಇಲಾಖೆ ಕೂಡಲೇ ಕ್ರಮ ಕೈಗೊಂಡಿದ್ದು, ಜಾಟಲ್ ರಸ್ತೆಯಲ್ಲಿರುವ ಶ್ರೀಜನ್ ಪಬ್ಲಿಕ್ ಶಾಲೆಗೆ ನೋಟಿಸ್ ನೀಡಿ ಶಾಲೆಯನ್ನು ಮುಚ್ಚಲಾಗಿದೆ.

 ವಿದ್ಯಾರ್ಥಿಯ ಕಾಲುಗಳನ್ನು ಹಗ್ಗದಿಂದ ಕಟ್ಟಿ ತರಗತಿಯ ಕಿಟಕಿಯಿಂದ ತಲೆಕೆಳಗಾಗಿ ನೇತುಹಾಕಿ ಹೊಡೆದಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಪ್ರಾಂಶುಪಾಲ ರೀನಾ ವಿದ್ಯಾರ್ಥಿಗಳ ಮುಂದೆ ಇಬ್ಬರು ಮಕ್ಕಳನ್ನು ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.

 ಪ್ರಾಂಶುಪಾಲೆ ರೀನಾ ಆರೋಪಗಳನ್ನು ನಿರಾಕರಿಸಿದ್ದು, ಅಜಯ್ ವಿರುದ್ಧ ಹಿಂದೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆಗಸ್ಟ್ 30ರಂದು ಅವನನ್ನು ವಜಾಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಶಿಸ್ತಿನ ಕ್ರಮವಾಗಿ ಇಬ್ಬರು ಮಕ್ಕಳನ್ನು ಕಪಾಳಮೋಕ್ಷ ಮಾಡಿದ್ದೇನೆಂಬುದನ್ನು ಆಕೆ ಒಪ್ಪಿಕೊಂಡಿದ್ದಾರೆ.

 ಸಂತ್ರಸ್ತ ಮಗು ತನ್ನ ಪೋಷಕರಿಗೆ, “ಅಜಯ್ ಅಂಕಲ್ ನನ್ನನ್ನು ತಲೆಕೆಳಗಾಗಿ ನೇತುಹಾಕಿ ಹೊಡೆದು, ವೀಡಿಯೊ ಚಿತ್ರೀಕರಿಸಿದ್ದಾನೆ” ಎಂದು ಹೇಳಿದ್ದಾಗಿ ವರದಿಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0