Kodagu

ಕುಶಾಲನಗರ ಎಲ್‌ಐಸಿ ಕಛೇರಿಯಲ್ಲಿ 70ನೇ ಸಂಸ್ಥಾಪನಾ ದಿನಾಚರಣೆ

admincoorgdaily

ಕುಶಾಲನಗರ ಎಲ್‌ಐಸಿ ಕಛೇರಿಯಲ್ಲಿ 70ನೇ ಸಂಸ್ಥಾಪನಾ ದಿನಾಚರಣೆ
ಕುಶಾಲನಗರ, ಸೆ.8: ಕುಶಾಲನಗರದ ಎಲ್‌ಐಸಿ ಕಛೇರಿಯಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) 70ನೇ ಸಂಸ್ಥಾಪನಾ ದಿನವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.

ಎಲ್‌ಐಸಿಯ ಧ್ಯೇಯ, ಸಾಧನೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರೊಂದಿಗೆ ಹೆಚ್ಚಿನ ಕುಟುಂಬಗಳಿಗೆ ಜೀವ ವಿಮೆಯ ಭದ್ರತೆಯನ್ನು ತಲುಪಿಸುವ ಸಂಕಲ್ಪವನ್ನು ಇನ್ಶೂರೆನ್ಸ್ ಕುಶಾಲನಗರ ತಂಡವು ಮಾಡಿತು.

ಎಲ್‌ಐಸಿ ಶಾಖಾ ವ್ಯವಸ್ಥಾಪಕ ಎಸ್.ಬಿ. ಶಿವಪ್ರಸಾದ್ ,

ಕುಶಾಲನಗರ ಎಲ್.ಐ.ಸಿ.ಕಛೇರಿಯಲ್ಲಿ ನಡೆದ ಎಲ್.ಐ.ಸಿ.ಯ 70 ನೇ ವಿಮಾ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಸ್ಥೆಯ ವತಿಯಿಂದ ಹೊರತರಲಾದ ಜೀವನ್ ರಕ್ಷಾ ಪಾಲಿಸಿಯ ಪ್ರಚಾರ ಸಾಮಾಗ್ರಿಯನ್ನು ಸುಂಟಿಕೊಪ್ಪದ ವಾಣಿಜ್ಯೋದ್ಯಮಿ
ಎಡ್ವರ್ಡ್ ಜಾರ್ಜ್ ವಿಲಿಯಮ್ ಬಿಡುಗಡೆಗೊಳಿಸಿದರು. ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಗ್ಯಾಲಕ್ಸಿ ಪ್ರತಿನಿಧಿ 
 ಸುಬ್ರಮಣಿ ಇತರರು ಇದ್ದಾರೆ