ಪೊನ್ನಂಪೇಟೆ ಮಹಿಳಾ ಸಹಕಾರ ಸಂಘದ 71ನೇ ವಾರ್ಷಿಕ ಮಹಾಸಭೆ
admincoorgdaily

ಪೊನ್ನಂಪೇಟೆ, ಸೆ.24: ನಂ.461ನೇ ಮಹಿಳಾ ಸಹಕಾರ ಸಂಘ ನಿಯಮಿತ, ಪೊನ್ನಂಪೇಟೆಯ 71ನೇ ವಾರ್ಷಿಕ ಮಹಾಸಭೆ ಗುರುವಾರ ಪೊನ್ನಂಪೇಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಸದಸ್ಯರನ್ನು ಸ್ವಾಗತಿಸಿದ ಇಮ್ಮಿ ಉತ್ತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ನಷ್ಟದಲ್ಲಿದ್ದ ಸಂಘ ಇದೀಗ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಸಂಘದ ಪ್ರಸ್ತುತ ಕಟ್ಟಡಕ್ಕೆ ನೆಲಹಾಸು ಅಳವಡಿಸಲು ಹಣದ ಅಗತ್ಯವಿದ್ದು, ಇದಕ್ಕಾಗಿ ಸದಸ್ಯರು ತಮ್ಮ ಕೈಲಾದಷ್ಟು ಸಹಕಾರ ನೀಡುವಂತೆ ಮನವಿ ಮಾಡಿದರು.
ಸದಸ್ಯರಿಗೆ ಊಟದ ಭತ್ಯೆ ನೀಡಲಾಯಿತು.
ಈ ಸಂದರ್ಭ ಉಪಾಧ್ಯಕ್ಷೆ ಮೂಕಳೇರ ಕಾವ್ಯ,ಖಜಾಂಚಿ ಸಣ್ಣುವಂಡ ಅಕ್ಕಮ್ಮ ನಿರ್ದೇಶಕರಾದ ಕಾರ್ತಮಾಡ ರಶಿಕಾ ಅಶ್ವತ್, ಮಾಣಿಪಂಡ ಪಾರ್ವತಿ, ಪಾರುವಂಗಡ ರಿಷ್ತಾ ದಿಲನ್, ಗುಮ್ಮಟ್ಟೀರ ಗಂಗಮ್ಮ, ಪುಟ್ಟಂಗಡ ರೋಹಿಣಿ, ಕಳ್ಳಿಚಂಡ ಅಮಿತಾ, ಚಿರಿಯಪಂಡ ರೇವತಿ, ಅನು, ಬೋಜಮ್ಮ ಹಾಗೂ ಮುತ್ತಮ್ಮ ಉಪಸ್ಥಿತರಿದ್ದರು.