ವಿಶ್ವ ಮಾನವ ಉದ್ಯಾನವನದಲ್ಲಿ ಕೊಡಗು ಹಿತರಕ್ಷಣಾ ವೇದಿಕೆಯಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
admincoorgdaily

ಮಡಿಕೇರಿ;
ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೇಶವ್ ಕಾಮತ್ ಹಾಗೂ ಮಾಜಿ ಪುರಸಭೆ ಉಪಾಧ್ಯಕ್ಷರಾದ ಟಿ.ಎಂ. ಅಯ್ಯಪ್ಪ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಪಿ. ರಮೇಶ್ ಅವರು ಧ್ವಜಾರೋಹಣ ನೆರವೇರಿಸಿದರು.
ಮಾಜಿ ಪುರಸಭೆ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಅವರು ರಾಜ್ಯೋತ್ಸವದ ಶುಭಾಶಯ ಕೋರಿ ಹಿತನುಡಿಗಳನ್ನಾಡಿದರು.
ವೇದಿಕೆಯ ಪದಾಧಿಕಾರಿ ಪ್ರಭು ರೈ ಅವರು ನೆರೆದಿದ್ದವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ರವಿ ಗೌಡ, ತಾಲೂಕು ಉಪಾಧ್ಯಕ್ಷ ನಾಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಿತ್, ಮಹಿಳಾ ಅಧ್ಯಕ್ಷೆ ಕವಿತಾ ಪ್ರಸಾದ್, ಕಾರ್ಮಿಕ ಘಟಕದ ಅಧ್ಯಕ್ಷೆ ದಿವ್ಯ, ನಗರ ಉಪಾಧ್ಯಕ್ಷೆ ಲಿಲ್ಲಿ ಗೌಡ, ಪೂರ್ಣಿಮಾ, ಬಾಲಕೃಷ್ಣ ನಾಯಕ್, ವೇದಿಕೆಯ ಸದಸ್ಯರಾದ ಜಾನ್ಸನ್, ಪ್ರವೀಣ್, ಅಜಿತ್, ವಿಜೇಶ್, ದೀಕ್ಷಿತ್ ಕುಮಾರ್, ವೈಭವ್, ಸುಜಿತ್ ಟಿ.ಆರ್, ಅಕ್ಷಯ್, ಗಜೇಂದ್ರ, ರೂಪಾ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್, ತಾಲೂಕು ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ವೆಂಕಟೇಶ್, ಮುನೀರ್ ಮಾಚರ್, ಸಮೀರ್, ಮಹದೇವಣ್ಣ, ವಸಂತ್ ಭಟ್, ಸುಲೇಮಾನ್, ಯೂಸುಫ್, ಶೇಕ್ ಆದಂ, ಕವನ್ ಕೊತ್ತುಳಿ, ಯೋಗು, ಸಂದೀಪ್, ರಾಮಯ್ಯ, ಭವನ್ ಡಿ.ಎಸ್. ಸೇರಿದಂತೆ ಹಲವರು ಹಾಜರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ವತಿಯಿಂದ ಸಾರ್ವಜನಿಕರಿಗೆ ಉಪಹಾರ, ಕಾಫಿ-ಟೀ ಮತ್ತು ಸಿಹಿ ವಿತರಿಸಲಾಯಿತು. ಪ್ರಭು ರೈ ಸ್ವಾಗತಿಸಿ, ಅಕ್ಷಿತ್ ವಂದಿಸಿದರು.