Kodagu

7ನೇ ತರಗತಿ ಬಾಲಕನಿಗೆ ಮಿಸ್ಟರ್ ಕರ್ನಾಟಕ ಪಟ್ಟ: ಕೊಡಗಿಗೆ ಕೀರ್ತಿ ತಂದ ರಿಧಿಂಷಾ

admincoorgdaily

7ನೇ ತರಗತಿ ಬಾಲಕನಿಗೆ ಮಿಸ್ಟರ್ ಕರ್ನಾಟಕ ಪಟ್ಟ: ಕೊಡಗಿಗೆ ಕೀರ್ತಿ ತಂದ ರಿಧಿಂಷಾ
ಸಿದ್ದಾಪುರ: ಬೆಂಗಳೂರಿನ ಯಲಹಂಕದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕೊಡಗಿನ ಬಾಲಕ ರಿಧಿಂಷಾ ಮಿಸ್ಟರ್ ಕರ್ನಾಟಕ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಷಾ ನ್ಯೂ ಫಿಟ್ನೆಸ್ ಜಿಮ್‌ನಲ್ಲಿ ತರಬೇತಿ ಪಡೆದಿರುವ ರಿಧಿಂಷಾ, ಈ ಹಿಂದೆ ಮಡಿಕೇರಿ ದಸರಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದನು.

ತರಬೇತುದಾರ ಸಜೀಸ್ ಹಾಗೂ ರೇಷ್ಮ ದಂಪತಿಯ ಎರಡನೇ ಪುತ್ರನಾದ ರಿಧಿಂಷಾ, ಪಾಲಿಬೆಟ್ಟದ ಲೂರ್ಡ್ಸ್ ಕಾನ್ವೆಂಟ್ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾನೆ.