ಚೆನ್ನಯ್ಯನಕೋಟೆ ಸರ್ವ ಸಹಾಯಿ ಮಿತ್ರ ಮಂಡಳಿಯಿಂದ, 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಸಿದ್ದಾಪುರ :-ಚೆನ್ನಯ್ಯನ ಕೋಟೆ ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ, 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಹೊಳಮಾಳದ ಬಸ್ ನಿಲ್ದಾಣ ಬದಿಯ ಸಂಘದ ಧ್ವಜಸ್ತಂಭದಲ್ಲಿ ಗಣ್ಯರು ಧ್ವಜಾರೋಹಣ ನೆರವೇರಿಸುವ ಮೂಲಕ ಗೌರವಪೂರ್ವಕವಾಗಿ ಆಚರಿಸಲಾಯಿತು.
ಚೆನ್ನಯ್ಯನ ಕೋಟೆ ಉಪ ಠಾಣಾಧಿಕಾರಿ ಸುನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.ಸಮಾಜ ಸೇವಕ ಗಣೇಶ ಮಾತನಾಡಿ ದೇಶಭಕ್ತಿ, ಏಕತೆ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಪ್ರತಿವರ್ಷ ಆಚರಿಸುತ್ತಿರುವ ಸರ್ವ ಸಹಾಯಿ ಮಿತ್ರ ಮಂಡಳಿ ಅವರ ದೇಶಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಚೆನ್ನಯ್ಯನ ಕೋಟೆ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ನಂಜಪ್ಪ ಪೂಜಾರಿ, ಹೊಳಮಾಳ ಜಮಾ ಮಸೀದಿ ಅಧ್ಯಕ್ಷ ಮುಸ್ತಫಾ , ಪಂಚಾಯಿತಿ ಸದಸ್ಯೆ, ಶೀಲಾ, ಸರ್ವಸಹಾಯಿ ಮಿತ್ರ ಮಂಡಳಿ ಅದ್ಯಕ್ಷರು, ಪಂಚಾಯಿತಿ ಉಪಾಧ್ಯಕ್ಷ ರಾದ, M, N, ವಿಜು ಸರ್ವಸಹಾಯಿ ಮಿತ್ರ ಮಂಡಳಿ ಯ ಎಲ್ಲಾ, ಪದಾಧಿಕಾರಿಗಳು ಮತು ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
