ಕೊಡಗು ಜಿಲ್ಲಾ ಕಾಂಗ್ರೆಸ್ ನಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Aug 15, 2026 - 12:37
 0  31
ಕೊಡಗು ಜಿಲ್ಲಾ ಕಾಂಗ್ರೆಸ್ ನಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಮಡಿಕೇರಿ; ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಜನ ನೀಡಿದ ಕೊಡಗೆ ಅಪಾರವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗಿಗೆ ಬಂದಾಗ ಕೊಡಗಿನ ಅನೇಕ ಜನರು ತಮ್ಮ ಒಡವೆಗಳನ್ನು ಅವರಿಗೆ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಸಹಕಾರ ನೀಡಿದ್ದರು. ಅನೇಕರು ಹೋರಾಟದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದರು.ಅಂತಹ ಮಹಾನುಭಾವರ ತ್ಯಾಗದ ಫಲವಾಗಿ ನಾವು ಸುಭದ್ರ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರು ಮಾತನಾಡಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳು ಉತ್ತಮವಾಗಿರಲಿಲ್ಲ.ಜವಾಹರಲಾಲ್ ನೆಹರೂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಈ ದೇಶವನ್ನು ಶ್ರಮಪಟ್ಟು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಿಸ್ವಾರ್ಥ ಸೇವೆಯ ಪರಿಣಾಮದಿಂದಲೇ ನಮ್ಮ ದೇಶ ಇಷ್ಟು ಮುಂದುವರಿದಿದೆ ಎಂದು ವಿವರಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ ರವರು ಮಾತನಾಡಿ ಭಾರತೀಯರು ಅವಿರತ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆದಿದ್ದು ಎಲ್ಲಾ ಪ್ರಜೆಗಳಿಗೆ ಸಮಾನ ಹಕ್ಕುಗಳು ಮತ್ತು ಸಮಾನ ಬದುಕು ನಡೆಸುವ ಅವಕಾಶಕ್ಕಾಗಿದ್ದು ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ , ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕೊತ್ತೋಳಿ ಕವನ್,ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿ ರವರು ಮಾತನಾಡಿ ಶುಭಾಶಯ ಕೋರಿದರು.

ಧ್ವಜಾರೋಹಣ ಕ್ಕೂ ಮೊದಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸೇವಾದಳದಿಂದ ಗೌರವ ವಂದನೆ ಸಲ್ಲಿಸಿ ಧ್ವಜಾರೋಹಣ ನಡೆಸುವಂತೆ ಕೋರಲಾಯಿತು. ನಗರ ಸಭೆ ನಾಮನಿರ್ದೇಶನ ಸದಸ್ಯರಾದ ಶ್ರೀಮತಿ ಜುಲೇಕಾಬಿ, ಮಂಡೀರ ಸದಾ ಮುದ್ದಪ್ಪ,ಜಿ.ಸಿ. ಜಗದೀಶ್,ಪ್ರಚಾರ ಸಮಿತಿ ಅಧ್ಯಕ್ಷರಾದ ವಿ.ಜಿ.ಮೋಹನ್, ಗ್ಯಾರಂಟಿ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್, ಫ್ಯಾನ್ಸಿ ಪಾರ್ವತಿ, ಮೂಡಾ ಸದಸ್ಯಾರಾದ ಆರ್ .ಪಿ.ಚಂದ್ರಶೇಖರ್,ಮೀನಾಜ್ ಪ್ರವೀಣ್,ಯುವ ಕಾಂಗ್ರೆಸ್ ನಗರಾಧ್ಯಕ್ಷ ಅರ್ಜುನ್ ಸೂರ್ಯ,ಡಿ.ಸಿ.ಸಿ ಸದಸ್ಯರಾದ ಖಲೀಲ್ ಬಾಷ, ಪ್ರಮುಖರಾದ ಕೆ.ಜೆ.ಪೀಟರ್,ಅಬ್ದಲ್ ಗಫೂರ್,ಕೋಚನ ಚೇತನ್,ಸುಭಾಷ್, ಫ್ಯಾನ್ಸಿ ಪಾರ್ವತಿ,ಲೀಲಾ ಶೇಷಮ್ಮ,ಮುನೀರ್ ಮಾಚರ್,ಶೇಖ್ ಅಹಮದ್, ಮಹಮ್ಮದ್ ಹಯಾತ್,ದೀಕ್ಷಿತ್, ವಿಮಲ,ಪವಿತ್ರ,ಪೊನ್ನಕ್ಕ,ತಾಜುನ್ನೀಸಾ,ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0