Kodagu

ಕರಡಿಗೋಡು ಗ್ರಾಮದಲ್ಲಿ 80ನೇ ಸ್ವಾತಂತ್ರ ದಿನ ಆಚರಣೆ

admincoorgdaily

ಕರಡಿಗೋಡು ಗ್ರಾಮದಲ್ಲಿ 80ನೇ ಸ್ವಾತಂತ್ರ ದಿನ ಆಚರಣೆ

ಸಿದ್ದಾಪುರ :-ಕರಡಿಗೋಡುಗ್ರಾಮದ ಫ್ಯೂನಿಕ್ಸ್ ಯುವಕ ಸಂಘದ ನೇತೃತ್ವದಲ್ಲಿ 80ನೇ ವರ್ಷದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ನಿವೃತ ಸೖನಿಕ ಕೆ. ಜಿ. ಮೋಹನ್ ಧ್ವಜಾರೋಹಣ ನೆರೆವೇರಿಸಿದರು ಶುಭಕೋರಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಎಂ. ಎ. ಯಮುನ ಮಾತನಾಡಿ ಭಾರತೀಯರಾದ ನಾವುಗಳು , ಜಾತಿ, ಧರ್ಮವನ್ನು ಮರೆತು ದೇಶದ ಐಕ್ಯತೆ, ಸಮಗ್ರತೆಗೆ ಕೖ ಜೋಡಿಸ ಬೇಕು ಎಂದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರದೀಶ್, ಹ್ಯಾರಿಸ್,ಇಬ್ರಾಹಿಂ, ಸಂಜು, ಪ್ರವೀಣ್, ರತೀಶ್, ಜ್ಯೋತೀಶ್. ಎಸ್. ಎನ್. ಡಿ. ಪಿ. ಮಾಜಿ ಜಿಲ್ಲಾ ಕಾರ್ಯದರ್ಶಿ ಸಜೀವ, ಕಾಫಿ ಬೆಳೆಗಾರರಾದ ಸೂರಜ್, ರಂಜು, ಕಿಶು, ವಿನೋದ್ ಗ್ರಾಮಸ್ಥರಾದ ಕುಞ್ಞಾಪು,ಸಾಜನ್,ಮೖದುಕುಟ್ಟಿ ಹಾಜರಿದ್ದರು.