ಹಳ್ಳಿಗಟ್ಟು ಬದರ್ ಜುಮಾ ಮಸೀದಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
admincoorgdaily

ಪೊನ್ನಂಪೇಟೆ:ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಂದು ಹಳ್ಳಿಗಟ್ಟಿನ ಬದರ್ ಜುಮಾ ಮಸೀದಿ ಆವರಣದಲ್ಲಿ ಸಂಭ್ರಮದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಇಜ್ಜತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಸಮ್ಮುಖದಲ್ಲಿ, ಜುಮಾ ಮಸೀದಿಯ ಆಡಳಿತ ಮಂಡಳಿ ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಬದರ್ ಜುಮಾ ಮಸೀದಿಯ ಖತೀಬ್ ಹಾರಿಸ್ ಮದನಿ, ಸದರ್ ಉಸ್ತಾದ್ ನಿಜಮುದ್ಧಿನ್ ಅನ್ವರಿ ಉಸ್ತಾದ್ ಹಾಗೂ ಕಾರ್ಯದರ್ಶಿ ರಶೀದ್ ಅವರು ಜಂಟಿಯಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ನಂತರ ಎಲ್ಲರೂ ರಾಷ್ಟ್ರಗೀತೆಯನ್ನು ಗಾಯನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಉಸ್ತಾದವರು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ತ್ಯಾಗ ಮತ್ತು ಬಲಿದಾನದ ಬಗ್ಗೆ ವಿವರಿಸಿದರು. ಶಾಂತಿ, ಸೌಹಾರ್ದತೆ ಮತ್ತು "ವಿವಿಧತೆಯಲ್ಲಿ ಏಕತೆ"ಯೇ ನಮ್ಮ ಭಾರತದ ಹೆಮ್ಮೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗಾಗಿ ಸತ್ಯಪ್ರತಿಜ್ಞೆ ಮಾಡಿ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕೊನೆಯಲ್ಲಿ ಮಸೀದಿಯ ಸದಸ್ಯರಾದ ಖಲೀಲ್ ಮತ್ತು ಅಬ್ದುಲ್ಲಾ ಅವರು ಆಗಮಿಸಿದ್ದ ಎಲ್ಲರಿಗೂ ಸಿಹಿ ವಿತರಿಸಿದರು.