ದಾರುಲ್ ಉಲೂಂ ಮದರಸದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Aug 17, 2026 - 17:32
 0  79
ದಾರುಲ್ ಉಲೂಂ ಮದರಸದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಕುಶಾಲನಗರ: ದಾರುಲ್ ಉಲೂಂ ಮದರಸಾ ಹಾಗೂ ಹಿಲಾಲ್ ಮಸ್ಜಿದ್, ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ, ರಾಷ್ಟ್ರೀಯ ಹೆಮ್ಮೆ ಹಾಗೂ ಸಂಭ್ರಮದ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ತಾರ್ ಸಾಹಿಬ್ ವಹಿಸಿದ್ದರು. ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖತೀಬ್ ಶಾಫಿ ಫೈಝಿ ಪ್ರಾರ್ಥನೆ ನೆರವೇರಿಸಿದರು.

ಕಾರ್ಯದರ್ಶಿ ಅಬ್ದುಲ್ ಕರೀಂ ಸ್ವಾಗತ ಭಾಷಣ ಮಾಡಿದರು. ಪ್ರಾಂಶುಪಾಲರಾದ ಉನೈಸ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎರಡನೇ ತರಗತಿ ವಿದ್ಯಾರ್ಥಿ ಮುಝ್ಝಮ್ಮಿಲ್ ಎಂ.ಐ. ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಸಾರುವ ಅರ್ಥಪೂರ್ಣ ಭಾಷಣ ಮಾಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ದೇಶದ ಭದ್ರತೆ ಹಾಗೂ ಸೇವೆಗಾಗಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಮಾಜಿ ಸೈನಿಕರಾದ ಅಬ್ದುಲ್ ಮುತ್ತಲಿಬ್ ಬಿ.ಎಂ. ಹಾಗೂ ಅಬ್ದುಲ್ ರಝಾಕ್ ಬಿ.ಎಂ. ಅವರನ್ನು ಗೌರವಿಸಲಾಯಿತು.

 ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಅಶ್ರಫ್ ಅಝ್ಹರಿ, ಅಧ್ಯಾಪಕರಾದ ಹಂಝ ಮುಸ್ಲಿಯಾರ್, ನಫೀರ್ ಮುಸ್ಲಿಯಾರ್, ಜಾಬಿರ್ ಅಝ್ಹರಿ, ಯಾಸೀನ್ ಫೈಝಿ, ತೌಸೀದ್ ಫೈಝಿ ಹಾಗೂ ಅಶ್ರಫ್ ಹುದವಿ ಸೇರಿದಂತೆ ಮದರಸ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ, ಸಹೋದರತ್ವ, ಶಾಂತಿ ಹಾಗೂ ನಾಗರಿಕ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ರಾಷ್ಟ್ರದ ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂಬ ಸಂದೇಶವನ್ನು ನೀಡಲಾಯಿತು. ದೇಶಭಕ್ತಿಯ ಸಂದೇಶವನ್ನು ಸಾರುತ್ತಾ, ರಾಷ್ಟ್ರೀಯ ಏಕತೆ, ಸೌಹಾರ್ದತೆ ಮತ್ತು ದೇಶದ ಪ್ರಗತಿಯ ಸಂಕಲ್ಪದೊಂದಿಗೆ 80ನೇ ಸ್ವಾತಂತ್ರ್ಯ ದಿನಾಚರಣೆ ಯಶಸ್ವಿಯಾಗಿ ಸಂಪನ್ನಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0