ಗೋಳಿಕಟ್ಟೆ ಬಡಾವಣೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
admincoorgdaily

ಮಡಿಕೇರಿ:ಮದೆನಾಡು ಸಮೀಪದ ಗೋಳಿಕಟ್ಟೆ ಹೊಸ ಬಡಾವಣೆಯಲ್ಲಿ 80ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಬಡಾವಣೆಯ ಎಸ್. ಎಲ್. ಲತೀಫ್, ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರ ಆನಂದ್ ಬಿ. ಎಸ್, ಮತ್ತು ಗಣೇಶೋತ್ಸವ ಸಮಿತಿ ಯ ಗೌರವ ಅಧ್ಯಕ್ಷ ಬಿ. ಸಿ. ಬಾಲಚಂದ್ರ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಡಾವಣೆ ಯ ಹಿರಿಯರಾದ ಜಾರಪ್ಪ ಪೂಜಾರಿ, ಎಮ್. ಆರ್. ಜೋಸೆಫ್,ಮೋಟ ಮತ್ತು ಬಡಾವಣೆಯ ಗಣೇಶೋತ್ಸವ ಸಮಿತಿಯ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಬಡಾವಣೆಯ ಬಂಧುಗಳು ಉಪಸ್ಥಿತರಿದ್ದರು, ಪಿ. ಯು. ಸುಂದರ ಕಾರ್ಯಕ್ರಮ ನಿರ್ವಹಿಸಿದರು.
ವರದಿ:ಪಿಯು ಸುಂದರ ಮದೆನಾಡು