National News

ರಾಷ್ಟ್ರ ರಾಜಧಾನಿ ಮೊಳಗಿದ ಕೊಡವ ಸಾಂಸ್ಕೃತಿಕ ಸಿರಿ; ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಮಹೇಶ್ ನಾಚಯ್ಯ ಮನವಿ

admincoorgdaily

ರಾಷ್ಟ್ರ ರಾಜಧಾನಿ ಮೊಳಗಿದ ಕೊಡವ ಸಾಂಸ್ಕೃತಿಕ ಸಿರಿ;  ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಮಹೇಶ್ ನಾಚಯ್ಯ ಮನವಿ
ಮಡಿಕೇರಿ:-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಕೊಡವ ಸಾಂಸ್ಕೃತಿಕ ಉತ್ಸವ ಹಾಗೂ ಕೊಡವ ಸಾಂಸ್ಕೃತಿಕ ಸಿರಿಯು ನೆರೆದಿದ್ದವರನ್ನು ಮೆರಗುಗೊಳಿಸಿತು. 

 ದೆಹಲಿ ಕರ್ನಾಟಕ ಸಂಘ ಹಾಗೂ ದೆಹಲಿ ಕೊಡವ ಸಮಾಜದ ಸಹಯೋಗದಲ್ಲಿ ನಡೆದ ಕೊಡವ ಸಾಹಿತ್ಯ ಉತ್ಸವದಲ್ಲಿ ಬಟ್ಟೆಪಾಟ್, ದುಡಿಕೊಟ್ಟ್ ಪಾಟ್, ಬಾಳೋಪಾಟ್, ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್, ಕೋಲಾಟ್, ತಾಲಿಪಾಟ್, ಗೆಜ್ಜೆತಂಡ್, ಕೊಡವ ನೃತ್ಯ ಹಾಗೂ ಕೊಂಬುಕೊಟ್ಟ್ ವಾಲಗತಾಟ್ ಇಡೀ ಕಾರ್ಯಕ್ರಮದ ಯಶಸ್ಸನ್ನು ಉತ್ತುಂಗಕ್ಕೆ ಏರಿಸಿತು.
ಕರ್ನಾಟಕ ಕೊಡವ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು, ಸಭಿಕರನ್ನು ಬಟ್ಟೆಪಾಟ್ ಮೂಲಕ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ದೆಹಲಿ ಕರ್ನಾಟಕ ಸಂಘದ ಅದ್ಯಕ್ಷರಾದ ವೇಣುಕುಮಾರ್, ದೆಹಲಿ ಕೊಡವ ಸಮಾಜ ಅಧ್ಯಕ್ಷರಾದ ಮಾಚಿಮಂಡ ಎ ಕಾರ್ಯಪ್ಪ, ಅಕಾಡೆಮಿ ಅದ್ಯಕ್ಷ ಮಹೇಶ್ ನಾಚಯ್ಯ ಜಂಟಿಯಾಗಿ ಉದ್ಘಾಟಿಸಿದರು.

ನಂತರ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಅವರು ಕೊಡವ ಭಾಷೆ ಕೊಡವರ ಉಸಿರು, ಕನ್ನಡ ನಮ್ಮೆಲ್ಲರ ಜೀವ. ಪ್ರಪಂಚದೆಲ್ಲೆಡೆ  ದೇಶದ ಘನತೆಯನ್ನು ಎತ್ತಿ ಹಿಡಿಯುವಲ್ಲಿ  ಕರ್ನಾಟಕದ ಜನತೆಯ ಸೇವೆ ಹಾಗೂ ಕಾಣಿಕೆ ದೊಡ್ಡದು. ಇದರಲ್ಲಿ ಕೊಡವರ ಪಾಲು ಬಹುದೊಡ್ಡದು ಎಂದರು.
ಕೊಡವ ವಿಶಿಷ್ಟ ಸಂಸ್ಕೃತಿ, ಭಾಷೆ, ಸಾಹಿತ್ಯ, ಜಾನಪದವು ರಾಜ್ಯ ಮತ್ತು ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಉಜ್ವಲಗೊಳಿಸಿದೆ ಎಂದರು. 
ಭಾರತೀಯ ಸೇನೆಯಲ್ಲಿದ್ದು ದೇಶ, ವಿದೇಶಗಳಲ್ಲಿ ದೇಶದ ಏಕತೆ, ಐಕ್ಯತೆಯ ದ್ಯೇಯೋದ್ದೇಶವನ್ನು ಹೊಂದಿ ದೇಶರಕ್ಷಣೆಯಲ್ಲಿ ದುಡಿದ ಮಹನೀಯರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಅಸಂಖ್ಯಾತ ಯೋಧರು ಕೊಡಗಿನ ಕೀರ್ತಿ ಪತಾಕೆ ಹಾರಿಸುವಲ್ಲಿ ಕಾರಣೀಭೂತರಾಗಿದ್ದಾರೆ ಎಂದು ಮಹೇಶ್ ನಾಚಯ್ಯ ಅವರು ವಿವರಿಸಿದರು. 

ಕೊಡವ ಸಾಹಿತ್ಯವನ್ನು ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ನಡಿಕೇರಿಯಂಡ ಚಿಣ್ಣಪ್ಪ ಸೇರಿದಂತೆ ಅನೇಕರು ಉಸಿರಾಗಿಸಿದ್ದಾರೆ. ಶಿಸ್ತು, ಸಂಯಮಕ್ಕೆ ಕೊಡವರು ಹೆಸರಾಗಿರುವವರು. ಕರ್ನಾಟಕದ ಸಮಸ್ತ ಕನ್ನಡಿಗರಿಗೆ ದೆಹಲಿಯಲ್ಲಿ ಕೊಡವರ ಐನ್‍ಮನೆ ಯಂತಿರುವ ಕರ್ನಾಟಕ ಸಂಘದ ಮೂಲಕ ಕರ್ನಾಟಕದ ವಿಭಿನ್ನ ಸಂಸ್ಕೃತಿ ಪ್ರತಿಬಿಂಬಿಸಲು ಕಾರಣವಾಗಿರುವ ಸಂಘ ಸ್ಥಾಪನೆಗೆ ಕಾರಣಕರ್ತರಾಗಿರುವ ಹಿರಿಯರಿಗೆಲ್ಲರಿಗೂ ಕೊಡವ ಅಕಾಡೆಮಿಯ ಪರವಾಗಿ ಚಿರಋಣಿಯಾಗಿರುತ್ತೇನೆ ಎಂದರು. 

ಕೊಡವ ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಕೇಂದ್ರ ಸರಕಾರ ಸ್ಥಾನಮಾನ ನೀಡುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ರೇಣುಕುಮಾರ್ ಮಾತನಾಡಿ, ಕೊಡವರು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ದೇಶ ಸೇವೆಯಲ್ಲಿ ಇವರ ಕಾಣಿಕೆ, ಕೊಡುಗೆ ಅಪಾರವಾದದ್ದು. ಕಾವೇರಿ ತಾಯಿಯನ್ನು ಕುಲಮಾತೆಯಾಗಿ ಪೂಜಿಸುವ ಕೊಡವರು ಸುಸಂಸ್ಕೃತರು. ಕೊಡವರು ತಮ್ಮ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.  

ದೆಹಲಿ ಕರ್ನಾಟಕ ಸಂಘದಲ್ಲಿ ಸಮಸ್ತ ಕನ್ನಡಿಗರ ಸಂಸ್ಕೃತಿ ಅನಾವರಣಕ್ಕೆ ಅವಕಾಶವಿದೆ. ಕೊಡವ ಸಂಸ್ಕೃತಿಯ ಕಾರ್ಯಕ್ರಮಗಳಿಗೆ ಸದಾ ಸ್ವಾಗತ ಬಯಸುತ್ತೇವೆ. ದೇಶ, ರಾಷ್ಟ್ರದ ವಿಚಾರದಲ್ಲಿ ನಾವೆಲ್ಲರೂ ಒಂದಾಗಿ ಭಾಗವಹಿಸುವ ಮನೋಭಾವ ಹೊಂದಿಕೊಳ್ಳಬೇಕು. ಕಾವೇರಿ ಹುಟ್ಟಿದ ನಾಡು ಕೊಡಗಿನ ಪ್ರಕೃತಿ ಸಿರಿಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಬೇಕು. ಹೀಗಿರುವಾಗ ಕೊಡವರ ರಕ್ಷಣೆಯಲ್ಲಿ ಸಮಸ್ತ ಕನ್ನಡಿಗರು ಒಂದಾಗಬೇಕೆಂದರು.

ದೆಹಲಿ ಕೊಡವ ಸಾಮಾಜ ಅಧ್ಯಕ್ಷ ಮಾಚಿಮಂಡ ಎ ಕಾರ್ಯಪ್ಪ ತಮ್ಮ ಮಾತಿನಲ್ಲಿ, ಕೊಡವ ಭಾಷೆಗೆ ತ್ವರಿತವಾಗಿ ಸಂವಿಧಾನದ ಎಂಟನೇ ಪರಿಚ್ಛೇದ ಅಡಿಯಲ್ಲಿ ಸ್ಥಾನವನ್ನು ಒದಗಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡಬೇಕಿದೆ ಎಂದರು.
ಅಕಾಡೆಮಿ ಸದಸ್ಯರಾದ ಕಂಬೆಯಂಡ ಡೀನ ಬೋಜಣ್ಣ, ಪಾನಿಕುಟ್ಟಿರ ಕೆ ಕುಟ್ಟಪ್ಪ. ಪೆÇನ್ನಿರ ಗಗನ್, ಕುಡಿಯರ ಎಂ ಕಾವೇರಪ್ಪ, ನಾಯಂದಿರ ಶಿವಾಜಿ, ಚೆಪ್ಪುಡಿರ ಉತ್ತಪ್ಪ, ನಾಪಂಡ ಗಣೇಶ ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯರಾದ ಚೆಪ್ಪುಡಿರ ಉತ್ತಪ್ಪ ಪ್ರಾರ್ಥಿಸಿದರು, ದೆಹಲಿ ಕರ್ನಾಟಕ ಸಂಘದ ಸದಸ್ಯ ಎಂ.ಶಿವಪ್ಪ  ಸ್ವಾಗತಿಸಿದರು, ದೆಹಲಿ ಕರ್ನಾಟಕ ಸಂಘದ ಜಂಟಿ ಕಾರ್ಯದರ್ಶಿ ಅಶ್ವಿನಿ ಬಿ.ಎಸ್. ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ವಂದಿಸಿದರು.

ಬಾಳೋಪಾಟ್'ಗಾರರಾಗಿ  ಮುಂಜಾಂದಿರ ದೇವಯ್ಯ, ಕಡೆಮಡ ಸುವಿತ್ ಸೋಮಣ್ಣ, ಅಯ್ಯಲಪಂಡ ಪಟ್ಟು ಪೆಮ್ಮಯ್ಯ, ಅಪ್ಪಚ್ಚಿರ ಕಟ್ಟಿ ಪೆಮ್ಮಯ್ಯ ಕಾರ್ಯ ನಿರ್ವಹಿಸಿದರು.
ಬೊಳಕಾಟ್'ಕಾರರಾಗಿ ಹಂಚೆಟ್ಟಿರ ವರುಣ್ ನಂಜಪ್ಪ, ಮಿನ್ನಂಡ ತರುಣ್ ಚಂಗಪ್ಪ, ತಾಪಂಡ ಹೇಮ್ ಚಂಗಪ್ಪ, ಕೇಳಪಂಡ ಲಿಂಕಿತ್ ತಿಮ್ಮಯ್ಯ, ಮುಕ್ಕಾಟಿರ ಲೇಖನ್ ಅಯ್ಯಪ್ಪ, ಬಾಚರಣಿಯಂಡ ಸೂರಜ್ ಸೋಮಯ್ಯ, ಐಚೋಡಿಯಂಡ ನೀರತ್ ಭೀಮಯ್ಯ, ಕರ್ತಂಡ ಮದನ್ ಮಂದಣ್ಣ, ಹಾಗೂ ಉಮ್ಮತಾಟ್, ಗೆಜ್ಜೆತಂಡ್ ತಂಡದಲ್ಲಿ ಮಲ್ಲಮಡ ಶಾಮಲ, ಮಚ್ಚಮಡ ವಿನೋದ್, ತೀತಮಡ ಸಪ್ತ, ಕರಿನೆರವಂಡ ಕರಿಷ್ಮ, ಸುಳ್ಳಿಮಡ ರಿನ್ಸಿ, ಸುಳ್ಳಿಮಡ ಶ್ವೇತ, ತೀತಮಡ ರಶ್ಮಿ ಇದ್ದರು.

ದೆಹಲಿಯಲ್ಲಿರುವ ನಿಡ್ಯಮಲೆ ಎ. ಮಾಧವ ಕುಟುಂಬಸ್ಥರು, ಅಲ್ಲುಮಡ ಕುಟುಂಬ್ಥರು, ಕುಞ್ಞಂಗಡ, ಬಡ್ಡಿರ ಅಜಿತ್ ಸಂಸಾರ, ಕರ್ತಂಡ ದಿಲನ್, ನಡಿಕೇರಿಯಂಡ. ಮಾಚಿಮಂಡ ಕುಟುಂಬಸ್ಥರು ಸೇರಿದಂತೆ ಕೊಡಗಿನ ಹಲವಾರು ಕುಟುಂಬಸ್ಥರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.