ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಿ.ಬಿ.ಶಿವಪ್ಪ ಅವರ 8ನೇ ಸಂಸ್ಮರಣೋತ್ಸವ

ಸೋಮವಾರಪೇಟೆ:ಬಿ.ಬಿ.ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಿ.ಬಿ.ಶಿವಪ್ಪ ಅವರ 8ನೇ ಸಂಸ್ಮರಣೋತ್ಸವವನ್ನು ಪಟ್ಟಣದ ಶ್ರೀಗಣಪತಿ ದೇವಾಲಯದಲ್ಲಿ ಗುರುವಾರ ಆಚರಿಸಲಾಯಿತು. ಬಳಗದ ಪದಾಧಿಕಾರಿಗಳಾದ ಡಿ.ಬಿ.ಧರ್ಮಪ್ಪ, ಬಿ.ಟಿ.ತಿಮ್ಮಶೆಟ್ಟಿ, ರಾಘವ, ಬಿ.ಎಸ್.ಅನಂತರಾಮ್, ತಾಕೇರಿ ಪೊನ್ನಪ್ಪ, ಪ್ರೇಮನಾಥ್, ಕೆ.ಜಿ.ಸುರೇಶ್, ಸುಮಾ ಸುದೀಪ್, ಎ.ಎಸ್.ಮಲ್ಲೇಶ್, ಶೇಷಪ್ಪ ಮತ್ತಿತ್ತರು ಇದ್ದರು.