State News

ಫ್ರೀ ಫೈರ್ ಗೇಮ್‌ಗೆ 8ನೇ ತರಗತಿ ಬಾಲಕ ಬಲಿ ;4.11 ಲಕ್ಷ ಕಳೆದುಕೊಂಡು ಆತ್ಮಹತ್ಯೆ!

admincoorgdaily

ಫ್ರೀ ಫೈರ್ ಗೇಮ್‌ಗೆ 8ನೇ ತರಗತಿ ಬಾಲಕ ಬಲಿ ;4.11 ಲಕ್ಷ ಕಳೆದುಕೊಂಡು ಆತ್ಮಹತ್ಯೆ!

 ದಾವಣಗೆರೆ:ಆನ್‌ಲೈನ್ ಫ್ರೀ ಫೈರ್ ಗೇಮ್ ಬಾಲಕನ ಬಲಿ ಪಡೆದಿದೆ. ಸ್ನೇಹಿತರಿಂದ ಹಣ ಕಳೆದುಕೊಂಡ ಬಾಲಕನೊಬ್ಬ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಬಾಲಕ ರವಿ ಅವರ ಎರಡನೇ ಪುತ್ರ ಮನೋಜ್ ಟಿ.ಆರ್ (13). ಚನ್ನಗಿರಿಯ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಪಾಂಡೋಮಟ್ಟಿ ಮತ್ತು ಕಾಲ್ತರೆ ಗ್ರಾಮದ ಆತನ ಸ್ನೇಹಿತರು ಗೇಮ್ ಐಡಿ ನೀಡುವುದಾಗಿ ನಂಬಿಸಿ ಬಾಲಕನಿಂದ ಸುಮಾರು 4.11 ಲಕ್ಷ ರೂ. ವಸೂಲಿ ಮಾಡಿಕೊಂಡು, ಮತ್ತೆ ಹಣ ತರುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮನೆಯಿಂದ ಪೋಷಕರಿಗೆ ತಿಳಿಯದಂತೆ ಹಣ ತೆಗೆದುಕೊಂಡು ಹೋಗುತ್ತಿದ್ದ ಬಾಲಕ ಆನ್‌ಲೈನ್ ಗೇಮ್‌ಗೆ ಹಾಕುತ್ತಿದ್ದ. ಒಮ್ಮೆ ತಾಯಿಯ ಮೊಬೈಲ್‌ನಿಂದ 11 ಸಾವಿರ ರೂ. ಹಣ ವರ್ಗಾವಣೆಯಾಗಿತ್ತು. ಪೋಷಕರು ವಿಚಾರಿಸಿದಾಗ ಮನೋಜ್ ಸಮಸ್ಯೆಯನ್ನು ಹೇಳಿಕೊಂಡಿದ್ದ. ಆ. 6ರಂದು ಪೋಷಕರು ಆತನಿಗೆ ಧೈರ್ಯ ತುಂಬಿ ಬೇರೆ ಮಕ್ಕಳಿಗೆ ಈ ರೀತಿಯ ಅನ್ಯಾಯ ಆಗುವ ಅನ್ಯಾಯ ತಡೆಯಲು ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಚನ್ನಗಿರಿ ಗಣೇಶ ವಿಸರ್ಜನೆಯಲ್ಲಿ ಪೊಲೀಸರು ಪಾಲಕರು ನೀಡಿದ ದೂರಿನಂತೆ ಒಬ್ಬ ಬಾಲಕ ಸೇರಿ ಐವರು ಸ್ಥಳೀಯರ ವಿರುದ್ಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಣೆಗೆ ಹೋದ ಹಿನ್ನೆಲೆ ಆ.7ರಂದು ಪ್ರಕರಣ ದಾಖಲಾಗಿರಲಿಲ್ಲ. ಸಂಜೆ ಚನ್ನಗಿರಿಯಿಂದ ಊರಿಗೆ ಮರಳಿದ ಬಾಲಕ ತನ್ನ ರೂಂಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಮಗ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪೋಷಕರು ಬಾಗಿಲು ಒಡೆದು, ಆತನನ್ನು ಚನ್ನಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗದಲ್ಲಿಯೇ ಕೊನೆಯುಸಿರು ಎಳೆದಿದ್ದ.