Kodagu

ಕೊಡಗು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ 9 ಮಂದಿ ಆಯ್ಕೆ

admincoorgdaily

ಕೊಡಗು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ 9 ಮಂದಿ ಆಯ್ಕೆ
ಮಡಿಕೇರಿ: 2026-27ನೇ ಸಾಲಿನ ಕೊಡಗು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 9 ಶಿಕ್ಷಕರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಡಿಕೇರಿ ತಾಲೂಕು: ಕೆ.ಬಾಡಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸರಸ್ವತಿ ಬಿ.ಕೆ, ಅಯ್ಯಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್.ಎಸ್. ಶಾಂತಿ ಹಾಗೂ ಮೂರ್ನಾಡು ಪ್ರೌಢಶಾಲೆಯ ಪ್ರಶಾಂತ್ ಎಸ್.ಡಿ.

ಸೋಮವಾರಪೇಟೆ ತಾಲೂಕು: ಕಲ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉಮೇಶ್ ಕುಮಾರ್ ಕೆ.ಪಿ, ನೆಲ್ಲಿಹುದಿಕೇರಿ ಕೆ.ಪಿ.ಎಸ್ ಶಾಲೆಯ ರೆಮ್ಮಿ ಪಿ.ಸಿ ಹಾಗೂ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯ ರತ್ನಕುಮಾರ್ ಕೆ.ಆರ್.

ವಿರಾಜಪೇಟೆ ತಾಲೂಕು: ಬಾಟಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇರಿ ಲೋಬೋ, ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಲಿಮ ಪಿ.ಹೆಚ್ ಹಾಗೂ ಪೊನ್ನಂಪೇಟೆ ಕೆ.ಪಿ.ಎಸ್ ಪ್ರೌಢಶಾಲೆಯ ಅನಿತಾ ಫುಟಾಡೊ ಆಯ್ಕೆಯಾಗಿದ್ದಾರೆ.