ನಿಷೇದಾಜ್ಞೆ ಜಾರಿಮಾಡಿ ಕಾರ್ಯಾಚರಣೆ ನಡೆಸಿದರು ಸೆರೆಯಾಗದ ಕಾಡಾನೆ
ಸಿದ್ದಾಪುರ:- ನಿಷೇದಾಜ್ಞೆ ಜಾರಿಗೊಳಿಸಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ 3 ಗಂಡಾನೆಗಳನ್ನು ಸೆರೆಹಿಡಿಯಲು ಆದೇಶ ನೀಡಿದರೂ ಸೆರೆಯಾಗೆದೆ ತಪ್ಪಿಸಿಕೊಂಡಿದೆ.
ದುಬಾರೆ ಸಾಕಾನೆ ಕೇಂದ್ರದ 6 ಸಾಕಾನೆಗಳ ಸಹಕಾರದೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ಪ್ರಾರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಅಮ್ಮತ್ತಿ ಶಾಖಾ ವ್ಯಾಪ್ತಿಯ ಕಾವಡಿ, ಹಚ್ಚಿನಾಡು, ಕಣ್ಣಂಗಾಲ, ಹಾಲುಗುಂದ, ಬೈರಂಬಾಡ, ಯಡೂರು, ಕರಡಿಗೋಡು, ಅಮ್ಮತ್ತಿ ಹಾಗೂ ಗುಹ್ಯ ಭಾಗಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು ಸಂಜೆಯಾದರೂ ಪುಂಡಾನೆ ಸೆರೆಯಾಗಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕಾರ್ಯಾಚರಣೆ ನಡೆಯುವ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿಗೊಳಿಸಿ ಮುಂಜಾಗ್ರತ ಕ್ರಮವಾಗಿ ಎಸ್ಟೇಟ್‌ಗಳಲ್ಲಿ ಕಾರ್ಮಿಕರಿಗೆ ಹಾಗೂ ಶಾಲಾ ಕಾಲೆಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
