ಅಮ್ಮ ಕುರ್ ಕುರೆ ಕೊಡಿಸುವುದಿಲ್ಲ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿದ ಬಾಲಕ!

Oct 5, 2025 - 11:00
 0  590
ಅಮ್ಮ ಕುರ್ ಕುರೆ ಕೊಡಿಸುವುದಿಲ್ಲ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿದ ಬಾಲಕ!
Photo credit: INDIA TODAY

ಸಿಂಗ್ರೌಲಿ (ಮಧ್ಯಪ್ರದೇಶ): ಅಮ್ಮ ಕುರ್ ಕುರೆ ಕೊಡಿಸುವುದಿಲ್ಲ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಬಾಲಕನೊಬ್ಬ ಫೋನ್ ಮಾಡಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.

ಕೇವಲ 20 ರೂಪಾಯಿಗಳ ಕುರ್ಕುರೆಯನ್ನು ತಾಯಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, 8 ವರ್ಷದ ಬಾಲಕನು ನೇರವಾಗಿ ಪೊಲೀಸ್ ತುರ್ತುಸಂಖ್ಯೆ 112 ಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ.

ಘಟನೆ ಖುತಾರ್ ಹೊರಠಾಣೆ ವ್ಯಾಪ್ತಿಯ ಚಿತರ್ವಾಯ್ ಕಲಾ ಗ್ರಾಮದಲ್ಲಿ ನಡೆದಿದೆ. ತಾಯಿ ಮತ್ತು ಸಹೋದರಿ ಕುರ್ಕುರೆ ಕೇಳಿದ ಕಾರಣಕ್ಕೆ ಹಗ್ಗದಿಂದ ಕಟ್ಟಿ ಹೊಡೆದಿದ್ದಾರೆ ಎಂದು ಬಾಲಕ ದೂರಿನಲ್ಲಿ ಹೇಳಿದ್ದಾನೆ. ದೂರಿನ ಸಮಯದಲ್ಲಿ ಆತ ಅಳಲು ಪ್ರಾರಂಭಿಸಿದಾಗ, ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪ್ರೀತಿಯಿಂದ ಸಮಾಧಾನಪಡಿಸಿ ತಕ್ಷಣ ಕುರ್ ಕುರೆ ತಲುಪಿಸುವುದಾಗಿ ಭರವಸೆ ನೀಡಿದರು. ಈ ಸಂಭಾಷಣೆಯ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ದೂರು ಸ್ವೀಕರಿಸಿದ ಬಳಿಕ, 112 ಡಯಲ್ ಪೊಲೀಸ್ ಸಿಬ್ಬಂದಿ ಉಮೇಶ್ ವಿಶ್ವಕರ್ಮ ತಕ್ಷಣ ಸ್ಥಳಕ್ಕೆ ತೆರಳಿ ಬಾಲಕ ಹಾಗೂ ತಾಯಿಯೊಂದಿಗೆ ಮಾತುಕತೆ ನಡೆಸಿದರು. ತಾಯಿಗೆ ಮಕ್ಕಳ ಮೇಲೆ ಹೊಡೆಯಬಾರದು ಎಂದು ಸಲಹೆ ನೀಡಿದರು. ಬಳಿಕ ಬಾಲಕನಿಗೆ ಸಮಾಧಾನ ಪಡಿಸಲು ಸ್ವತಃ ಕುರ್ ಕುರೆ ಖರೀದಿಸಿ ಕೊಟ್ಟರು.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಬಾಲಕನ ದೂರಿಗೆ ತಲೆದೂಗಿದ್ದು, ಪೊಲೀಸರ ಮಮತೆಯುತ ಪ್ರತಿಕ್ರಿಯೆಯನ್ನೂ ಶ್ಲಾಘಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 1
Wow Wow 0