Kodagu

ಅಲ್ಲಂಡ ಕುಟುಂಬದ ನಿಯೋಗದಿಂದ ಶಾಸಕ ಪೊನ್ನಣ್ಣನವರ ಭೇಟಿ

admincoorgdaily

ಅಲ್ಲಂಡ ಕುಟುಂಬದ ನಿಯೋಗದಿಂದ ಶಾಸಕ ಪೊನ್ನಣ್ಣನವರ ಭೇಟಿ

ವಿರಾಜಪೇಟೆ:ತಾಲ್ಲೂಕಿನ ಅರಮೇರಿ ಗ್ರಾಮದ ಅಲ್ಲಂಡ ಕುಟುಂಬದ ನಿಯೋಗ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರನ್ನು ಭೇಟಿ ಮಾಡಿ ತಮ್ಮ ಕುಟುಂಬಸ್ಥರ ಮನೆಗಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮನವಿಯನ್ನು ಸಲ್ಲಿಸಿದರು.

 ಶಾಸಕರ ಗೃಹ ಕಛೇರಿಯಲ್ಲಿ ಮನವಿಯನ್ನು ಸ್ವೀಕರಿಸಿದ ಪೊನ್ನಣ್ಣ ನವರು ಕೋರಿಕೆ ಈಡೇರಿಸುವ ಭರವಸೆ ನೀಡಿದರು. ಕುಟುಂಬದ ಆದ್ಯಕ್ಷರಾದ ಅಲ್ಲಂಡ ಸದಾ ಪೊನ್ನಪ್ಪ, ಕಾರ್ಯದರ್ಶಿ ಅಲ್ಲಂಡ ಕಸ್ತೂರಿ ಚಂಗಪ್ಪ, ನಿರ್ದೇಶಕರುಗಳಾದ ನೀಮಾ,ಅಪ್ಪಣ್ಣ, ಧೀರಜ್ ಶಾಸಕರನ್ನು ಭೇಟಿ ಮಾಡಿದ ನಿಯೋಗದಲ್ಲಿ ಉಪಸ್ಥಿತರಿದ್ದರು.