ಕಂಡಕರೆಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ:ಗಮನಸೆಳೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ

ಕಂಡಕರೆಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ:ಗಮನಸೆಳೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ
ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಫ್ಲವರ್ ಶೋ..

ಚೆಟ್ಟಳ್ಳಿ:ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಂ ಜಮಾಅತ್ ಕಮಿಟಿ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ.ಅ) ಅವರ 1500ನೇ ಜನ್ಮದಿನವು ಸಂಭ್ರಮದಿಂದ ನೆರವೇರಿತು. ಈದ್-ಮಿಲಾದ್ ಅಂಗವಾಗಿ ಕಾರ್ಯಕ್ರಮಕ್ಕೆ ಶುಕ್ರವಾರ ಮಹಲ್ ಖತೀಬರಾದ ಅಬ್ದುಲ್ ಸಲಾಂ ಸಖಾಫಿ ಹಾಗೂ ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ ಧ್ವಜಾರೋಹಣ ‌ನೆರವೇರಿಸಿ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶುಕ್ರವಾರ ರಾತ್ರಿ ಕಂಡಕರೆ ಹಯಾತುಲ್ ಇಸ್ಲಾಮ್ ಮದರಸ ಹಳೆ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

 ಶನಿವಾರ ಬೆಳಗ್ಗೆ ಎಂಟು‌ ಗಂಟೆಗೆ ಕಂಡಕರೆ ಮಸೀದಿಯಿಂದ ಕಾಫಿ ಬೋರ್ಡ್ ರವರೆಗೆ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು. ಈದ್ ಮಿಲಾದ್ ಸಂದೇಶ ಜಾಥಾ ಎಲ್ಲರ ಗಮನ ಸೆಳೆಯಿತು. ನಂತರ ಹಳೆ ವಿದ್ಯಾರ್ಥಿಗಳ ದಫ್ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಹಯಾತುಲ್ ಇಸ್ಲಾಮ್ ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಸ್ಕೌಟ್ ಹಾಗೂ ಫ್ಲವರ್ ಶೋ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳು ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಈ ಸಂದರ್ಭ ಮಹಲ್ ಖತೀಬಾರದ ಅಬ್ದುಲ್ ಸಲಾಂ ಸಖಾಫಿ,ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ,‌ಕಾರ್ಯದರ್ಶಿ ಸರ್ಫುದ್ದೀನ್,ಉಪಾಧ್ಯಕ್ಷ ಹುಸೈನ್ ಪಿ.ಎ,ಸಹ ಕಾರ್ಯದರ್ಶಿ ಗಫೂರ್ ಪಿ.ಎಂ, ಖಜಾಂಜಿ ಹಾರಿಸ್,ಈದ್ ಮಿಲಾದ್ ಆಚರಣಾ ಸಮಿತಿ ಅಧ್ಯಕ್ಷ ಹನೀಫ ಮುಸ್ಲಿಯಾರ್,ಮದರಸ ಮುಖ್ಯೋಪಾಧ್ಯಾಯ ಹಸೈನಾರ್ ಮುಸ್ಲಿಯಾರ್,ಅಧ್ಯಾಪಕರುಗಳಾದ ಸೈಫುದ್ದೀನ್ ಮುಸ್ಲಿಯಾರ್,ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಇದ್ದರು.