Kodagu

ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಮರ ಬಿದ್ದು ಅಸ್ತವ್ಯಸ್ತಗೊಂಡ ವಾಹನ ಸಂಚಾರ

admincoorgdaily

ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಮರ ಬಿದ್ದು ಅಸ್ತವ್ಯಸ್ತಗೊಂಡ ವಾಹನ ಸಂಚಾರ

ಮಡಿಕೇರಿ: ಇಂದು ಬೆಳಿಗ್ಗೆ 6 ಗಂಟೆಗೆ ಸುಂಟಿಕೊಪ್ಪ ಸಮೀಪದ ಕೆದಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

 ಕಳೆದ 24 ಗಂಟೆಗಳಲ್ಲಿ ತುಂತುರು ಮಳೆ ಮತ್ತು ಬಿರುಸಿನ ಗಾಳಿಯ ಪರಿಣಾಮ ಬೃಹತ್ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಡ್ಡಿಯಾಗಿತ್ತು. ಮರ ಬಿದ್ದ ಪರಿಣಾಮ ಕೆದಕಲ್ ನಿಂದ ಗದ್ದೆಹಳ್ಳದವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.

 ಇದನ್ನ ಅರಿತ ಗ್ರಾಮಸ್ಥರು ಮತ್ತು ಮಡಿಕೇರಿ ಅಗ್ನಿ ಶಾಮಕ ದಳದವರು ಆಗಮಿಸಿ ಮರವನ್ನು ಕತ್ತರಿಸಿ ತೆರವು ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವಾಹನ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಸುಂಟಿಕೊಪ್ಪ ಮಲಯಾಳಿ ಸಮಾಜದ ಮಾಜಿ ಅಧ್ಯಕ್ಷರಾದ ಶಶಿ ಅವರು ತಿಳಿಸಿದ್ದಾರೆ.