ನಾಪೋಕ್ಲು-ಕೈಕಾಡು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಬೃಹತ್ ಗಾತ್ರದ ಮರ : ಕೆಲಕಾಲ ಸಂಚಾರಕ್ಕೆ ಅಡಚಣೆ
admincoorgdaily
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲುವಿನಿಂದ ಕೈಕಾಡು ಪಾರಾಣೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಮುಖ್ಯ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಕೈಕಾಡು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ನಾಪೋಕ್ಲು-ವಿರಾಜಪೇಟೆ ಮುಖ್ಯರಸ್ತೆಯ ಕೈಕಾಡು ಗ್ರಾಮದಬಳಿ ರಸ್ತೆ ಬದಿಯ ತೋಟದಿಂದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಮರ ಬೀಳುವ ಸಂದರ್ಭ ಯಾವುದೇ ವಾಹನ ಸಂಚಾರ ಇಲ್ಲದ್ದರಿಂದ ಅನಾಹುತ ತಪ್ಪಿದಂತಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಊಟಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಅವರು ಸ್ಥಳೀಯರ ಹಾಗೂ ಸಾರ್ವಜನಿಕರ ಸಹಕಾರದಿಂದ ರಸ್ತೆಯಲ್ಲಿದ್ದ ಮರವನ್ನು ಯಂತ್ರೋಪಕರಣ ಬಳಸಿ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಗ್ರಾಮಸ್ಥರಾದ ನಾಯಕಂಡ ಅಮಿತ್, ಕದ್ದಣಿಯಂಡ ಮನು,ಮುಕ್ಕಾಟಿರ ಪುನೀತ್,ಅಪ್ಪನೆರವಂಡ ಕೌಶಿಕ್,ಹರೀಶ್,ಕೂತಂಡ ರವಿ,ಬೊಳ್ಳಂಡ ನಿರನ್, ಪೇರಿಯಂಡ ದೀಪು,ಮೂಕಂಡಬಾಣೆ ರಘು ಸೇರಿದಂತೆ ಮತ್ತಿತರರು ಮರ ತೆರವುಗೊಳಿಸಲು ಸಹಕರಿಸಿದರು.