ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ
ಸಿದ್ದಾಪುರ : ಚಾಲಕನ ಅಜಾಗರೂಕತೆಯ ಚಾಲನೆಯಿಂದ ಮರದ ದಿಮ್ಮಿಗಳನ್ನು ತುಂಬಿದ ಲಾರಿಯೊಂದು ರಸ್ತೆ ಬದಿಯಲ್ಲಿ ಮಗುಚಿದ ಘಟನೆ ಭಾನುವಾರ ವಾಲ್ನೂರು ಗ್ರಾಮದ ಒಂಟಿಯಂಗಡಿ ಸಮೀಪ ನಡೆದಿದೆ. ವಾಲ್ನೂರು ಗ್ರಾಮದ ತ್ಯಾಗತ್ತೂರು ಸಮೀಪ ಮರದ ದಿಮ್ಮಿಗಳನ್ನು ತುಂಬಿಸಿ ಕೇರಳಕ್ಕೆ ತೆರಳುತ್ತಿದ್ದ ವಾಹನದ ಚಾಲಕನ ಅಜಾಗರೂಕತೆಯ ಚಾಲನೆಯ ಪರಿಣಾಮ ಲಾರಿಯು ರಸ್ತೆ ಬದಿಯಲ್ಲಿ ಮಗುಚಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಲಿಲ್ಲ.