ಸಿದ್ದಾಪುರ ಪಟ್ಟಣದಲ್ಲಿ ಮನಮೋಹಕ ಕಾಮನಬಿಲ್ಲು

Jun 7, 2026 - 12:30
 0  622
ಸಿದ್ದಾಪುರ ಪಟ್ಟಣದಲ್ಲಿ ಮನಮೋಹಕ ಕಾಮನಬಿಲ್ಲು

ಸಿದ್ದಾಪುರ; ಮುಂಗಾರು ಮಳೆಯ ನಡುವೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಪಟ್ಟಣದಲ್ಲಿ ಶನಿವಾರ ಸಂಜೆ ಆಕಾಶದಲ್ಲಿ ಮೂಡಿದ ಸುಂದರ ಕಾಮನಬಿಲ್ಲು ಸಾರ್ವಜನಿಕರ ಗಮನ ಸೆಳೆಯಿತು.

ಸಂಜೆಯ ವೇಳೆಯಲ್ಲಿ ಸುರಿದ ಮಳೆಯ ಬಳಿಕ ಸೂರ್ಯನ ಕಿರಣಗಳು ಮೋಡಗಳ ನಡುವೆ ಹರಿದಾಗ ಆಕಾಶದಲ್ಲಿ ಅರ್ಧವೃತ್ತಾಕಾರವಾಗಿ ಮೂಡಿದ ವರ್ಣರಂಜಿತ ಕಾಮನಬಿಲ್ಲು ಪ್ರಕೃತಿ ಪ್ರಿಯರನ್ನು ಆಕರ್ಷಿಸಿತು. ಪಟ್ಟಣದ ಹಲವೆಡೆಗಳಿಂದ ಸ್ಪಷ್ಟವಾಗಿ ಗೋಚರಿಸಿದ ಕಾಮನಬಿಲ್ಲಿನ ದೃಶ್ಯವನ್ನು ಜನರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಹಸಿರು ಬೆಟ್ಟಗಳು, ತೆಂಗಿನ ಮರಗಳು ಹಾಗೂ ಮೋಡಗಳಿಂದ ಆವೃತವಾದ ಹಿನ್ನೆಲೆಯ ನಡುವೆ ಮೂಡಿದ ಕಾಮನಬಿಲ್ಲು ಸಿದ್ದಾಪುರದ ಪ್ರಕೃತಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು. ಕೆಲಕಾಲ ಮಾತ್ರ ಕಾಣಿಸಿಕೊಂಡ ಈ ಅಪರೂಪದ ದೃಶ್ಯ ಸ್ಥಳೀಯರಿಗೆ ಸಂತಸವನ್ನುಂಟು ಮಾಡಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2