‘ನನ್ನ ಗಂಡ ಗಂಡಸೇ ಅಲ್ಲ’ ಎಂದಿದ್ದ ರೀಲ್ಸ್ ರಾಣಿ ಮೋನಿಕಾ ಪ್ರಕರಣಕ್ಕೆ ಹೊಸ ತಿರುವು

Dec 17, 2025 - 14:02
 0  1.9k
‘ನನ್ನ ಗಂಡ ಗಂಡಸೇ ಅಲ್ಲ’ ಎಂದಿದ್ದ ರೀಲ್ಸ್ ರಾಣಿ ಮೋನಿಕಾ ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರು, ಡಿ. 16: ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಂದಿಗೆ ಪರಾರಿಯಾಗಿದ್ದ ಪ್ರಕರಣದಿಂದ ರಾಜ್ಯದ ಗಮನ ಸೆಳೆದಿದ್ದ ‘ರೀಲ್ಸ್ ರಾಣಿ’ ಮೋನಿಕಾ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಪತಿಯ ಮನೆ ಬಿಟ್ಟು ಹೋಗುವ ವೇಳೆ ಯಾವುದೇ ಬಟ್ಟೆ ಅಥವಾ ಆಭರಣಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದ ಮೋನಿಕಾ ಅವರ ಹೇಳಿಕೆ ಸುಳ್ಳು ಎಂಬುದು ಇದೀಗ ಬಹಿರಂಗವಾಗಿದೆ.

ಸೆಪ್ಟೆಂಬರ್ 31, 2025ರಂದು ಮಧ್ಯಾಹ್ನ ಮನೆಗೆ ಬಂದ ಮೋನಿಕಾ, ಎರಡು ದೊಡ್ಡ ಬ್ಯಾಗ್‌ಗಳಲ್ಲಿ ಬಟ್ಟೆ ಹಾಗೂ ಆಭರಣಗಳನ್ನು ತುಂಬಿಕೊಂಡು ಹೊರಟಿರುವುದು ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ. ಈ ದೃಶ್ಯಾವಳಿ ಇದೀಗ ಪೊಲೀಸರ ವಶದಲ್ಲಿದೆ.

ಮೋನಿಕಾ ಅವರು ತಮ್ಮ ಹೇಳಿಕೆಯಲ್ಲಿ ಯಾವುದೇ ವಸ್ತುಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದರೂ, ವಾಸ್ತವದಲ್ಲಿ ಮನೆಯಲ್ಲಿದ್ದ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಿ ಪತಿ ಮಂಜುನಾಥ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 3
Angry Angry 0
Sad Sad 3
Wow Wow 0