ಮದುವೆ ಮಾಡಲಿಲ್ಲವೆಂದು ತಾಯಿ ಮೇಲೆ ಕಲ್ಲು ಎತ್ತಿ ಹಾಕಿದ ಪಾಪಿ ಪುತ್ರ

Mar 28, 2026 - 01:01
 0  974
ಮದುವೆ ಮಾಡಲಿಲ್ಲವೆಂದು ತಾಯಿ ಮೇಲೆ ಕಲ್ಲು ಎತ್ತಿ ಹಾಕಿದ ಪಾಪಿ ಪುತ್ರ

ಹಾಸನ: ತನಗೆ ಮದುವೆ ಮಾಡಿಕೊಡಲಿಲ್ಲವೆಂಬ ಆಕ್ರೋಶದಲ್ಲಿ ಮಗನೇ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಗುರುವಾರ ನಡೆದಿದೆ.

ಗಂಗಮ್ಮ ಎಂಬುವವರ ಮೇಲೆ ಅವರ ಪುತ್ರ ಉಮಾಶಂಕರ್ ಹಲ್ಲೆ ನಡೆಸಿದ್ದಾನೆ. “ನನಗೆ ಹೆಣ್ಣು ನೋಡಿ ಮದುವೆ ಮಾಡಲಿಲ್ಲ, ನಿಮ್ಮಿಂದ ನನ್ನ ಜೀವನ ಹಾಳಾಗಿದೆ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲೆಯ ಮೇಲೆ ಕಲ್ಲು ಎತ್ತಿ ಹೊಡೆದಿರುವುದಾಗಿ ತಿಳಿದುಬಂದಿದೆ.

ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಗಂಗಮ್ಮ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 1