ಗುಡ್ಡೆಹೊಸೂರಿನ ಅಂಗನವಾಡಿಗೆ ಆಧುನಿಕತೆಯ ಸ್ಪರ್ಶ
ಕುಶಾಲನಗರ, ಜು.23 : ಗ್ರಾಮದ ಮಕ್ಕಳ ಬಾಲ್ಯಕ್ಕೆ ಮತ್ತಷ್ಟು ಉತ್ಸಾಹ ತುಂಬುವ ಉದ್ದೇಶದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯತಿಯು ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸಂಪೂರ್ಣ ಆಧುನಿಕ ಹಾಗೂ ಶಿಶುಸ್ನೇಹಿ ರೂಪ ನೀಡುವ ಮೂಲಕ ಮಾದರಿಯಾಗಿದೆ. ಮಕ್ಕಳ ಕಲಿಕೆ ಮತ್ತು ಆಟದ ವಾತಾವರಣವನ್ನು ಆಹ್ಲಾದಕರಗೊಳಿಸುವ ನಿಟ್ಟಿನಲ್ಲಿ ಹಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ.
ಗೋಡೆಗಳಿಗೆ ಚಿತ್ತಾರಗಳಿಂದ ಕೂಡಿದ ಮನಮೋಹಕ ಬಣ್ಣ ಬಳಿಯಲಾಗಿದ್ದು, ಶುಚಿತ್ವದಿಂದ ಕೂಡಿದ ನೆಲ (ಫ್ರೆಂಚ್ ಶೈಲಿಯ ಸುಂದರ ಫ್ಲೋರಿಂಗ್) ಹಾಗೂ ಮಕ್ಕಳಿಗೆ ಗಾಯವಾಗದಂತೆ ಗುಣಮಟ್ಟದ ಫ್ಲೋರ್ ಮ್ಯಾಟ್‌ಗಳನ್ನು ಅಳವಡಿಸಲಾಗಿದ್ದು, ಕುಳಿತುಕೊಳ್ಳಲು ಅನುಕೂಲಕರವಾದ ರಂಗುರಂಗಿನ ಕುರ್ಚಿ-ಮೇಜುಗಳು, ಆಧುನಿಕ ಆಟಿಕೆಗಳು ಮತ್ತು ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆಯಲ್ಲದೆ ಡಿಜಿಟಲ್ ಕಲಿಕೆಗೆ ಪೂರಕವಾಗಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಟೆಲಿವಿಷನ್ (Smart TV) ವ್ಯವಸ್ಥೆ ಮಾಡಲಾಗಿದ್ದು, ದೃಶ್ಯ-ಶ್ರವಣ ಮಾಧ್ಯಮದ ಮೂಲಕ ಮಕ್ಕಳು ಸುಲಭವಾಗಿ ಕಲಿಯುವಂತೆ ರೂಪಿಸಲಾಗಿದೆ.
ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ನೈರ್ಮಲ್ಯದಿಂದ ಕೂಡಿದ ಅಡುಗೆ ಮನೆ ಮತ್ತು ಮಕ್ಕಳು ಬಳಸಲು ಅನುಕೂಲಕರವಾದ ಬಾಲಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ. ಗುಡ್ಡೆಹೊಸೂರು ಗ್ರಾಮ ಪಂಚಾಯತಿಯ ಈ ತೆರನ ಕಾಳಜಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಶ್ರೀಧರ್ ನಾರಾಯಣ್
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
