Kodagu

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದು ಗಾಯ

admincoorgdaily

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮರ ಬಿದ್ದು ಗಾಯ

ಪೊನ್ನಂಪೇಟೆ, ಜು.31: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಒಣಗಿದ ಮರ ಉರುಳಿ ಬಿದ್ದು ಗಾಯಗೊಂಡ ಘಟನೆ ಪೊನ್ನಂಪೇಟೆ ತಾಲೂಕಿನ ನಡಿಕೇರಿ ಗ್ರಾಮದಲ್ಲಿ ಜುಲೈ 30ರಂದು ನಡೆದಿದೆ.

 ಪೊನ್ನಂಪೇಟೆ ತಾಲೂಕಿನ ನಡಿಕೇರಿ ನಿವಾಸಿ ಕಿರುಂದಂಡ ಎನ್. ಗಿರೀಶ್ ಅವರು ತಮ್ಮ ಮನೆಯ ಸಮೀಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಭಾರಿ ಗಾಳಿ ಮಳೆಗೆ ಸಮೀಪದ ತೋಟದಲ್ಲಿದ್ದ ಒಣಗಿದ ಮರ ಬುಡ ಸಮೇತ ಕಿತ್ತು ರಸ್ತೆಯ ಮೇಲೆ ಬಿದ್ದಿದೆ. ಈ ವೇಳೆ ಮರದ ಕೊಂಬೆ ಅವರ ಎಡ ಭುಜಕ್ಕೆ ಬಡಿದು ಗಂಭೀರ ಗಾಯವಾಗಿದೆ.

 ಗಾಯಗೊಂಡ ಗಿರೀಶ್ ಅವರನ್ನು ತಕ್ಷಣ ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಕರವಾಗಿದೆ ಎಂದು ಅವರ ಪತ್ನಿ ಮಲ್ಲಿಗೆ ತಿಳಿಸಿದ್ದಾರೆ. ಘಟನೆಯ ಕುರಿತು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗಿರೀಶ್ ಅವರ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ನಡಿಕೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ .