ಕೊಂಡಂಗೇರಿಯಲ್ಲಿ ಬೀಸಿದ್ದು ಎರಡು ಸೆಕೆಂಡ್ ಸುಂಟರಗಾಳಿ; ಹಾರಿಸಿದ್ದು ಮನೆ ಛಾವಣಿಯ ಶೀಟ್, ಅಂಗಡಿಯ ಹೆಂಚು, ಫ್ರಿಡ್ಜ್, ಸಿಂಟೆಕ್ಸ್ ಟ್ಯಾಂಕ್

May 1, 2026 - 12:08
 0  518
ಕೊಂಡಂಗೇರಿಯಲ್ಲಿ ಬೀಸಿದ್ದು ಎರಡು ಸೆಕೆಂಡ್  ಸುಂಟರಗಾಳಿ;  ಹಾರಿಸಿದ್ದು ಮನೆ ಛಾವಣಿಯ ಶೀಟ್, ಅಂಗಡಿಯ ಹೆಂಚು, ಫ್ರಿಡ್ಜ್, ಸಿಂಟೆಕ್ಸ್ ಟ್ಯಾಂಕ್

ಮಡಿಕೇರಿ: ಕೊಂಡಂಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ಎಂದಿನಂತೆಯೇ ಇತ್ತು. ಇದ್ದಕ್ಕಿದ್ದಂತೆ ಸುಂಟರಗಾಳಿ ಬೀಸಿದ್ದು ಎರಡು ಸೆಕೆಂಡ್ ಮಾತ್ರ.

ಆದರೆ ಒಂದೆರಡು ಕ್ಷಣದ ಸುಂಟರಗಾಳಿ ಸೃಷ್ಟಿದ್ದು ನಾನಾ ಅವಾಂತರಗಳನ್ನು ಕೊಂಡಂಗೇರಿಯಲ್ಲಿ ನಿನ್ನೆ ರಾತ್ರಿ 7,

 7.30 ರ ನಡುವಿನ ಅವಧಿಯಲ್ಲಿ ಬೀಸಿದ ಸುಂಟರಗಾಳಿಯ ಆರ್ಭಟಕ್ಕೆ ಮರಗಳು ಧರಾಶಾಯಿ ಆಗಿ ವಾಹನ ಹಾಗೂ ಮನೆಯ ಮೇಲೆ ಬಿದ್ದು ಜಖಂಗೊಳಿಸಿದ್ದರೆ ಇನ್ನೊಂದೆಡೆ, ಸಾದುಲಿ ಎಂಬುವವರ ಮನೆಗೆ ಅಳವಡಿಸಿದ್ದ ಛಾವಣಿಯ ಶೀಟ್ ಗಳು ಗಾಳಿಗೆ ಹಾರಿಕೊಂಡು ಬಂದಿದೆ.

ಅದನ್ನು ತೆಂಗಿನ ಮರ ತಡೆದು ನಿಲ್ಲಿಸಿದೆ. ತೆಂಗಿನ ಮರ ಇಲ್ಲದಿದ್ದಲ್ಲಿ ಈ ಛಾವಣಿಯ ಶೀಟ್ ಇನ್ನಷ್ಟು ದೂರಕ್ಕೆ ಹಾರಿಕೊಂಡು ಹೋಗಿ ಅನಾಹುತ ಸಂಭವಿಸಲಿತ್ತು. ಸುಂಟರಗಾಳಿಯ ತೀವ್ರತೆಗೆ ಅಂಗಡಿಯೊಂದರ ಹೆಂಚುಗಳು ಹಾರಿಕೊಂಡು ಹೋಗಿವೆ.

ಮತ್ತೊಂದು ಅಂಗಡಿಯ ಮುಂದೆ ಇಟ್ಟಿದ್ದ ತಂಪುಪಾನೀಯ/ಐಸ್ ಕ್ರೀಮ್ ನ ಫ್ರಿಡ್ಜ್ ಸುಂಟರಗಾಳಿಗೆ ಸಿಲುಕಿ ಬೇರೆ ಕಡೆಗೆ ಹಾರಿ ಬಿದ್ದಿದೆ. ಕಟ್ಟಡವೊಂದರ ಮೇಲಿದ್ದ ಸಿಂಟೆಕ್ಸ್ ಟ್ಯಾಂಕ್ ಶಾಲೆ ಮೇಲೆ ಹಾರಿ ಬಿದ್ದಿದೆ. ಮತ್ತೊಂದು ಅಂಗಡಿಯ ಮುಂದೆ ತೂಗಿಹಾಕಿದ್ದ ಬ್ಯಾಗ್ ಗಳು ಗಾಳಿಗೆ ಹಾರಿ ಹೋಗಿವೆ. ಅದೃಷ್ಟವಶಾತ್ ಸುಂಟರಗಾಳಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದರೂ ಪ್ರಾಣಾಪಾಯ ಸಂಭವಿಸದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0