ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ಮಹಿಳೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Dec 3, 2025 - 23:29
 0  2.5k
ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ಮಹಿಳೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Photo credit: TV09

ಪಾಣಿಪತ್ (ಹರ್ಯಾಣ): ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂಬ ಅಸಹಜ ಮತ್ಸರದಿಂದ ಮಹಿಳೆಯೊಬ್ಬಳು ನಾಲ್ವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿರುವ ಬೆಚ್ಚಿಬೀಳಿಸುವ ಘಟನೆ ಪಾಣಿಪತ್ ಜಿಲ್ಲೆಯ ನೌಲ್ತಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಪೂನಂ ತನ್ನ ಆರು ವರ್ಷದ ಸಹೋದರನ ಮಗಳು ವಿಧಿಯನ್ನು ಹತ್ಯೆಗೈದ ನಂತರ, ಇದೇ ರೀತಿಯಲ್ಲಿ ಮೂರು ಮಕ್ಕಳ ಪ್ರಾಣ ಕಸಿದಿರುವುದನ್ನು ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ. ಈ ಪೈಕಿ ಒಬ್ಬ ಆಕೆಯ ಸ್ವಂತ ಪುತ್ರನಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಸೋಮವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ವಿಧಿ, ತಾತ ಪಾಲ್ ಸಿಂಗ್, ಅಜ್ಜಿ ಓಂವತಿ, ತಂದೆ ಸಂದೀಪ್ ಮತ್ತು 10 ತಿಂಗಳ ತಮ್ಮನೊಂದಿಗೆ ಕಾರ್ಯಕ್ರಮದಲ್ಲಿ ಇದ್ದಳು. ಸುಮಾರು ರಾತ್ರಿ 1.30ರ ವೇಳೆಗೆ ಕುಟುಂಬದ ಕೆಲವು ಸದಸ್ಯರು ಕಾರ್ಯಕ್ರಮದಿಂದ ತೆರಳಿದ ನಂತರ ಬಾಲಕಿ ನಾಪತ್ತೆಯಾಗಿದ್ದಾಳೆ ಎಂಬ ಕರೆ ತಂದೆಗೆ ಬಂದಿತ್ತು.

ಒಂದು ಗಂಟೆ ಹುಡುಕಾಟದ ನಂತರ, ವಿಧಿಯ ಅಜ್ಜಿ ಓಂವತಿ ಸಂಬಂಧಿಕರ ಮನೆಯಲ್ಲಿ ಮೊದಲ ಮಹಡಿಯ ಸ್ಟೋರ್ ರೂಮ್ ಹೊರಗಿನಿಂದ ಚಿಲಕ ಹಾಕಿರುವುದು ಗಮನಕ್ಕೆ ಬಂದಿತ್ತು. ಬಾಗಿಲು ತೆರೆದಾಗ ಟಬ್‌ನಲ್ಲಿದ್ದ ನೀರಿನಲ್ಲಿ ವಿಧಿಯ ತಲೆ ಮುಳುಗಿದ್ದು, ಪಾದ ನೆಲಕ್ಕೆ ತಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಯಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.

ಮಗುವನ್ನು ಹತ್ಯೆಗೈಯಲಾಗಿದೆ ಎಂದು ತಂದೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ವಿಧಿಯ ಅತ್ತೆ ಪೂನಂ ಈ ಕೃತ್ಯಕ್ಕೆ ಸಂಬಂಧವಿರುವುದನ್ನು ಪತ್ತೆಹಚ್ಚಿದರು. ವಿಚಾರಣೆಯಲ್ಲಿ ಆಕೆ ಮತ್ಸರ ಮತ್ತು ಹಗೆತನದಿಂದ ಸುಂದರ ಮಕ್ಕಳನ್ನೇ ಗುರಿಯಾಗಿಸಿಕೊಂಡು ಹತ್ಯೆಗೈಯುತ್ತಿದ್ದೂದಾಗಿ ಹೇಳಿಕೊಂಡಿದ್ದಾಳೆ. ತನಗಿಂತ ಯಾರೂ ಸುಂದರವಾಗಿ ಕಾಣುವುದು ಆಕೆಗೆ ಸಹ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಪೂನಂ ನಾಲ್ವರು ಮಕ್ಕಳನ್ನು ಇದೇ ರೀತಿಯಲ್ಲಿ ನೀರಿನಲ್ಲಿ ಮುಳುಗಿಸಿ ಕೊಂದಿರುವುದು ದೃಢಪಟ್ಟಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 4
Sad Sad 2
Wow Wow 0