ಬೆಂಗಳೂರಿನಲ್ಲಿ ಕೊಡಗಿನ ಯುವತಿ ಆತ್ಮಹತ್ಯೆ
admincoorgdaily

ಮಡಿಕೇರಿ, ಫೆ. 4: ಮೂಲತಃ ದೊಡ್ಡಪುಲಿಕೋಟು ಗ್ರಾಮ ನಿವಾಸಿ, ಪೊನ್ನುಕಂಡ ಜೀವನ್ ಹಾಗೂ ಸ್ವಾತಿ ಅವರ ಪುತ್ರಿ ಸಾಕ್ಷಿ (19) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಾಕ್ಷಿ ನಿನ್ನೆ ರಾತ್ರಿ ತಾನು ತಂಗಿದ್ದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೊಸಕೋಟೆ ಅವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.