ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯುನ ನೂತನ ಅಧ್ಯಕ್ಷ ಎ.ಸಿ. ಸಾಬು ಆಯ್ಕೆ

ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯುನ ನೂತನ ಅಧ್ಯಕ್ಷ ಎ.ಸಿ. ಸಾಬು ಆಯ್ಕೆ
ಅಧ್ಯಕ್ಷ

ವಿರಾಜಪೇಟೆ: ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯುನ ನೂತನ ಕೊಡಗು ಜಿಲ್ಲಾ ಸಮಿತಿ ಸದಸ್ಯರಾಗಿ ಜಿಲ್ಲೆಯ ಐದು ತಾಲೂಕುವಿನ ಸದಸ್ಯರನ್ನು ಒಳಗೊಂಡು 31 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಇತ್ತಿಚೆಗೆ ನಡೆದ ಸಂಘದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ನೂತನ ಅಧ್ಯಕ್ಷರಾಗಿ ಎ.ಸಿ ಸಾಬು ಮರು ಆಯ್ಕೆಗೊಂಡಿದ್ದಾರೆ.

ಗೌರವ ಅಧ್ಯಕ್ಷರಾಗಿ ವಕೀಲರಾದ ಪ್ರಮೋದ್, ಉಪಾಧ್ಯಕ್ಷರುಗಳಾಗಿ ಬೈಜು, ಹಮೀದ್, ಉಷಾ, ಮಂಗಳ, ಕೆ.ಯು. ಲಲಿತ ಕುಮಾರಿ, ಕಾರ್ಯದರ್ಶಿಗಳಾಗಿ ಕೆ.ಎಸ್ ರಮೇಶ್(ಶಾಜಿ), ಸಹ ಕಾರ್ಯದರ್ಶಿಗಳಾಗಿ ಕೆ.ಕೆ. ಹರಿದಾಸ್, ಮೊಣ್ಣಪ್ಪ, ಮಹೇಶ್, ಸುದರ್ಶನ್, ಖಜಾಂಚಿಯಾಗಿ ಕೆ.ಎ. ಖಾಶಿಂ ಅವರನ್ನು ಒಳಗೊಂಡು 13 ಸದಸ್ಯರನ್ನು ಪದಾಧಿಕಾರಿಗಳಾಗಿ ಮತ್ತು 18 ಸದಸ್ಯರನ್ನು ನೂತನ ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.