ಮುದ್ದಂಡ ಹಾಕಿ ಉತ್ಸವದ ಒಂದು ಕೋಟಿ ಅನುದಾನದ ಚೆಕ್ ವಿತರಿಸಿದ ಎ.ಎಸ್.ಪೊನ್ನಣ್ಣ
admincoorgdaily

ಮಡಿಕೇರಿ;2025 ರಲ್ಲಿ ನಡೆದ ವಿಶ್ವವಿಖ್ಯಾತ ಮುದ್ದಂಡ ಕಪ್ ಕೊಡವ ಹಾಕಿ ನಮ್ಮೆ ಗೆ ಸರ್ಕಾರದಿಂದ ಬಿಡುಗಡೆಯಾದ ಒಂದು ಕೋಟಿ ರೂಗಳ ಚೆಕ್ ನ್ನು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ವಿಧಾನ ಸೌಧದಲ್ಲಿ ಮುದ್ದಂಡ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಕೊಡವ ಹಾಕಿ ಅಕಾಡಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ,ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬ,ಕಲಿಯಂಡ ಸಂಪನ್ ಅಯ್ಯಪ್ಪ,ಮುಕ್ಕಾಟಿರ ಸೋಮಯ್ಯ, ಮುದ್ದಂಡ ರಿಷಿನ್,ಲೀನಾ ಪೂಣಚ್ಚ,ರಂಜಿತ್ ಪೊನ್ನಪ್ಪ,ಕಾವೇರಿ,ಫ್ಯಾನ್ಸಿ,ಆದರ್ಶ, ಅಶೋಕ್,ದಿವ್ಯ,ವಿನೀತ್,ಮುತ್ತಪ್ಪ, ವಾಣಿ ಮತ್ತಿತರರು ಉಪಸ್ಥಿತರಿದ್ದರು.