ಒಲಂಪಿಯನ್ ಎ.ಬಿ.ಸುಬ್ಬಯ್ಯ ನಿವಾಸಕ್ಕೆ ಎ.ಎಸ್.ಪೊನ್ನಣ್ಣ ಭೇಟಿ

May 1, 2026 - 17:11
 0  373
ಒಲಂಪಿಯನ್ ಎ.ಬಿ.ಸುಬ್ಬಯ್ಯ ನಿವಾಸಕ್ಕೆ ಎ.ಎಸ್.ಪೊನ್ನಣ್ಣ ಭೇಟಿ

ಮಡಿಕೇರಿ; ಭಾರತ ಹಾಕಿಯ ಧ್ರುವ ತಾರೆ ಎಂದು ಬಿಂಬಿತರಾಗಿರುವ ಖ್ಯಾತ ಅಂತರಾಷ್ಟ್ರೀಯ ಹಾಕಿ ಪಟು,ಮಾಜಿ ಒಲಂಪಿಯನ್, ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಎ.ಬಿ.ಸುಬ್ಬಯ್ಯನವರ ನಿವಾಸಕ್ಕೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಇಂದು ಭೇಟಿ ನೀಡಿದರು.

 ಎ.ಬಿ.ಸುಬ್ಬಯ್ಯ ನವರ ತಂದೆ ಅಂಜಪರವಂಡ ಬೋಪಯ್ಯ ನವರು ನಿನ್ನೆಯ ದಿನ ತಮ್ಮ 92 ವರ್ಷ ಪ್ರಾಯದಲ್ಲಿ ನಿಧನರಾಗಿದ್ದ ಹಿನ್ನಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಪೊನ್ನಣ್ಣ ನವರು ಸುಬ್ಬಯ್ಯ ನಿವಾಸಕ್ಕೆ ಭೇಟಿ ನೀಡಿದರು.ಈ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ನಿವೃತ್ತ ಡಿ.ಸಿ.ಎಫ್ ವಾಟೇರಿರ ಕಾರ್ಯಪ್ಪ,ಪ್ರಮುಖರಾದ ಸೂರಜ್ ಹೊಸೂರು ರವರು ಶಾಸಕರೊಂದಿಗೆ ಉಪಸ್ಥಿತರಿದ್ದು ಎ.ಬಿ.ಸುಬ್ಬಯ್ಯ ನವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0